ಒಂದಡಿ ನೀರಿನ ಟ್ಯಾಂಕ್ ನಲ್ಲಿ  ಬಿದ್ದು ಸಾಯಲು ಸಾಧ್ಯವೇ..?  ಸಿಎಂ ಬಿಎಸ್ ವೈ ಪತ್ನಿ ಸಾವಿನ ಬಗ್ಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೊಸ ಬಾಂಬ್…

ರಾಮನಗರ,ಸೆ,20,2019(www.justkannada.in): ಸಿಎಂ ಯಡಿಯೂರಪ್ಪ ಪತ್ನಿ ಸಾವು ಸಹಜವಲ್ಲ…? ಅನುಮಾನಾಸ್ಪದವಾಗಿ ಸಿಎಂ ಬಿಎಸ್ ವೈ ಪತ್ನಿ ಸಾವಾಗಿತ್ತು. ಒಂದು ಅಡಿ ಒಂದು‌ ಅಡಿ ಇರುವ ನೀರಿನ ಸಂಪಿಗೆ ಬಿದ್ದು ಸತ್ತಿದಿದ್ದರು. ಇದು ಅನುಮಾನಾಸ್ಪದ ಸಾವು ಅಲ್ಲವೇ..? ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೊಸಬಾಂಬ್ ಸಿಡಿಸಿದ್ದಾರೆ.

ಚನ್ನಪಟ್ಟಣದಲ್ಲಿ ಇಂದು ಮಾಧ್ಯಮದ ಜತೆ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಒಂದಡಿ ನೀರಿನ ಟ್ಯಾಂಕ್ ನಲ್ಲಿ  ಬಿದ್ದು ಸಾಯಲು ಸಾಧ್ಯವೇ..? ಇದರ ಬಗ್ಗೆ ಯಾರು ಕೂಡ ಪ್ರಚಾರ ಮಾಡಲ್ಲ. ಅವರೇ ಈ ರಾಜ್ಯವನ್ನ ಆಳುವವರು. ಅದನ್ನೇ ಜನರು ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು.

ಜನರಿಗಾಗಿ ಇನ್ನೂ ನಾನು ರಾಜಕೀಯದಲ್ಲಿ ಇದ್ದೇನೆ…

ಪ್ರಸ್ತುತ ರಾಜಕೀಯದಿಂದ ಬೇಸತ್ತಿದ್ದೇನೆ. ನಾನು ಯಾವುದೇ ಒಂದು ಅಕ್ರಮ ಮಾಡಿಲ್ಲ. ಬನ್ನಿ ನಮ್ಮ ಮನೆ ಹತ್ತಿರ ಯಾವ ಸಿಬಿಐ, ಐಟಿ, ಇಡಿ ಅವರು ಬರ್ತಿರಾ ಬನ್ನಿ ಎಂದು ಸವಾಲು ಹಾಕಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ,  ನಾನು ಯಾವ ಅಧಿಕಾರಿಗೂ ತೊಂದರೆ ಕೊಟ್ಟಿಲ್ಲ. ನನಗೆ ಬಿಡದಿಯಲ್ಲಿ ಕೃಷಿ ಭೂಮಿ ಇದೆ. ನನಗೆ ರಾಜಕೀಯ ಅವಶ್ಯಕತೆ ಇಲ್ಲ. ಜನರಿಗಾಗಿ ಇನ್ನೂ ನಾನು ರಾಜಕೀಯದಲ್ಲಿ ಇದ್ದೇನೆ ಎಂದು ಹೇಳಿದರು.

ಇದೇ ವೇಳೆ ಮಾಧ್ಯಮದ ವಿರುದ್ದ ಹರಿಹಾಯ್ದ ಮಾಜಿ ಸಿಎಂ ಹೆಚ್.ಡಿಕೆ, ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಮಾಡಿದ್ರೆ ತಪ್ಪು ಅದೇ ನಿಮ್ಮ ಸಚಿವರು ವಾಸ್ತವ್ಯ ಮಾಡಿದ್ರೆ ಸರಿ…? ಎಂದು ಕಿಡಿಕಾರಿದರು.

ಬೆಂಗಳೂರಿನಲ್ಲಿ ನಡೆದ ಡಿಕೆಶಿ ಪರ ರ್ಯಾಲಿಯಲ್ಲಿ ಭಾಗವಹಿಸದ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ಡಿ ಕುಮಾರಸ್ವಾಮಿ, ನನ್ನನ್ನು ವಿಲನ್ ರೀತಿ ಬಿಂಬಿಸಿದ್ದರು. ಯಡಿಯೂರಪ್ಪ ಸಿಎಂ ಆದ ಸಂದರ್ಭದಲ್ಲಿ ವಿದ್ಯುಚ್ಛಕ್ತಿಯಲ್ಲಿ ಲೂಟಿ ಮಾಡಿದ್ದರು. ನಾನು ಅದನ್ನು ತನಿಖೆ ಮಾಡಿಸಿ ಎಂದು ಡಿಕೆಶಿಗೆ ಹೇಳಿದ್ದೆ. ಆದರೆ ಡಿಕೆಶಿ ಅವರು ಅದನ್ನು ತನಿಖೆ ಮಾಡಿಸಲಿಲ್ಲ. ಎರಡು ವರ್ಷಗಳ ಹಿಂದೆ ಡಿಕೆಶಿ ಮೇಲೆ ಐಟಿ ದಾಳಿ ಮಾಡಲು ಯಡಿಯೂರಪ್ಪ ಪತ್ರ ಬರೆದಿದ್ದರು. ಅವರನ್ನ ಕಾಪಾಡಲು ಹೋಗಿದ್ದೆ ಡಿಕೆಶಿ ಇವತ್ತಿನ ಪರಿಸ್ಥಿತಿ ಬಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಾಧ್ಯಮಗಳ ಮಾಲೀಕರನ್ನ ನಂಬಿ ನಾನು ಬದುಕುತ್ತಿಲ್ಲ. ಮಾಧ್ಯಮದವರ ಮಾಲೀಕರ ಗುಲಾಮ ನಾನಾಗಲ್ಲ. ನನ್ನ ನಂಬಿರುವ ಜನರಿಗೆ ಸಲಾಂ ಹೊಡಿಯುತ್ತೇನೆ ಅಷ್ಟೇ ಎಂದು ಮಾಧ್ಯಮಗಳಿಗೆ ಚಾಟಿ ಬೀಸಿದರು.

ನಾನು ಸಿಎಂ ಆದ ಸಂಧರ್ಭದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆಸಕ್ತಿ ಕೊಟ್ಟಿದ್ದೇನೆ. ಆದರೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಉತ್ತಮ ಶಿಕ್ಷಣ  ತೃಪ್ತಿ ತಂದಿಲ್ಲ. ಹಾಗೆಯೇ ಅಭಿವೃದ್ಧಿಗೆ ಹೆಚ್ಚು ಹೊತ್ತು ನೀಡದ್ದೇನೆ. ಕೆಲ ರಾಜಕಾರಣಿಗಳು ಭಾಷಣಕ್ಕೆ ಮಾತ್ರ ಮೀಸಲು ಆಗಿದೆ. ಉದ್ಯೋಗ ಸೃಷ್ಟಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಫಲರಾಗಿದ್ದಾರೆ ಎಂದು ಟೀಕಿಸಿದರು.

ನಾನು ಯಾವುದೇ ಇಡಿ ಐಟಿಗೂ ಹೆದರುವ ಪ್ರಶ್ನೆಯೇ ಇಲ್ಲ

ನಾನು ಸಿಎಂ ಆಗಿದ್ದು ಕೆಲವರಿಗೆ ಸಹಿಸಲು ಆಗಲಿಲ್ಲ. ಸಿಎಂ ಹುದ್ದೆ ಮುಳ್ಳಿನ ಹಾಸಿಗೆ ಆಗಿತ್ತು, ಈ ನಡುವೆ ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ. ನಮ್ಮ ಸಮ್ಮಿಶ್ರ ಸರ್ಕಾರ ತೆಗೆಯಲು ಭಗೀರಥ ಸಿ.ಪಿ.ಯೋಗೇಶ್ವರ್ ಮುಂದಾಳತ್ವ ವಹಿಸಿದ್ದರು. ಚನ್ನಪಟ್ಟಣ ಮಾಜಿ ಶಾಸಕ ಸಿ‌ಪಿ.ಯೋಗೇಶ್ವರ್ ಲೀಡರ್ ಶಿಫ್ . ನಾನು ಪಾಪದ ದುಡ್ಡನ್ನ ಸಂಪಾದನೆ ಮಾಡಲು ಹೋಗಲಿಲ್ಲ. ಪಾಪದ ಹಣ ಇದ್ದರೆ ಶಾಸಕರನ್ನ ಹಿಡಿದಿಟ್ಟುಕೊಳ್ಳಬಹುದಿತ್ತು. ಆದ್ರೆ ಪಾಪದ ದುಡ್ಡು ನಾನು ಸಂಪಾದನೆ ಮಾಡಲಿಲ್ಲ. ನಾನು ಯಾವುದೇ ಇಡಿ ಐಟಿಗೂ ಹೆದರುವ ಪ್ರಶ್ನೆಯೇ ಇಲ್ಲ. ನಾನು ಯಾವುದೇ ಪಾಪದ ಹಣ ಸಂಪಾದನೆ ಮಾಡಿಲ್ಲ ಎಂದು ಹೆಚ್,ಡಿಕೆ ತಿಳಿಸಿದರು.

ಇಡಿ, ಐಟಿಯವರು ಡಿಕೆಶಿ ಗೆ ಪ್ರಶ್ನೆ ಮಾಡಿದ್ದಾರೆ. ಅವರ ಜಮೀನಿನಲ್ಲಿ ಬೆಳೆ ಬದಲು ಚಿನ್ನ ಬೆಳೆದಿದ್ದಾರಾ ಎಂದು ಪ್ರಶ್ನೆ ಮಾಡಿದ್ದಾರೆ. ಆದರೆ ಕಳೆದ 25 ವರ್ಷದಿಂದ ತೆರಿಗೆ ಕಟ್ಟುತ್ತಿದ್ದಾರೆ. ಅವತ್ತಿನಿಂದ ಈ ಬಗ್ಗೆ ಯಾಕೆ ಪ್ರಶ್ನೆ ಮಾಡಿಲ್ಲ. ಅವರೇ ಪ್ರೋತ್ಸಾಹ ಮಾಡ್ತಾರೆ, ಮತ್ತೆ ಅವರೇ ಹಿಂಸೆ ಕೊಡ್ತಾರೆಂದು ಹೆಚ್.ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರ ಒಂದು ಬಿಡಿಗಾಸು ನೆರೆಗೆ ಕೊಟ್ಟಿಲ್ಲ

ಕರ್ನಾಟಕಕ್ಕೆ ಪಿಎಂ ಮೋದಿ ಬರ್ತಾರೆ. ಆದ್ರೆ ಒಂದು ಬಿಡಿಗಾಸು ನೆರೆಗೆ ಕೊಟ್ಟಿಲ್ಲ. ಅವರ ಅಪ್ಪನ ಮನೆಯಿಂದ ದುಡ್ಡು ಕೊಡ್ತಾರಾ. ನಮ್ಮ ತೆರಿಗೆ ಹಣವನ್ನು ಕೊಡ್ತಿಲ್ಲ. ಯಡಿಯೂರಪ್ಪ ಅವರ ಭೇಟಿಗೆ ಮೋದಿ ಅವಕಾಶ ಕೊಡ್ತಿಲ್ಲ ಎಂದು ಗುಡುಗಿದರಿ.

ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ರಾಮನಗರ ತಹಶಿಲ್ದಾರ್ ರಘುಮೂರ್ತಿ ಇದ್ದ. ಅವನು ಭ್ರಷ್ಟಾಚಾರದಲ್ಲಿ ಜೈಲಿಗೆ ಹೋಗಿ ಬಂದಿದ್ದ. ಆದ್ರೆ ಇವಾಗ ಅವನಿಗೆ ಯಲಹಂಕ ತಹಶಿಲ್ದಾರ್ ಆಗಿ ನೇಮಕ ಮಾಡ್ತಾರೆ. 1.75 ಕೋಟಿ ಕೊಟ್ಟು ತಹಶಿಲ್ದಾರ್ ಆಗಿದ್ದಾನೆ. ನಾನು ನಿಮ್ಮ ವಿಧ್ಯಾರ್ಥಿಗಳಿಗೆ ಮನವಿ ಮಾಡ್ತೇನೆ. ನೀವೆ ಇದೆಲ್ಲದರ ವಿರುದ್ಧ ದಂಗೆ ಹೇಳಬೇಕು ಎಂದು ಹೆಚ್.ಡಿ ಕುಮಾರಸ್ವಾಮಿ ಕರೆ ನೀಡಿದರು.

Key words: possible – fall – water tank -Former CM HD Kumaraswamy- new bomb – CM BS yeddyurappa- wife’s death