ಸಿದ್ಧರಾಮಯ್ಯ ಕಾಲ್ ಮಾಡಿದ್ರೂ ಸ್ವೀಕರಿಸದ ಆರೋಪ: ಸ್ಪಷ್ಟನೆ ನೀಡಿದ ಶಾಸಕ ತನ್ವೀರ್ ಸೇಠ್…

Promotion

ಮೈಸೂರು,ಫೆಬ್ರವರಿ,27,2021(www.justkannada.in):  ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯ 16 ಬಾರಿ ಕಾಲ್ ಮಾಡಿದ್ರೂ ತನ್ವೀರ್  ಸೇಠ್ ರಿಸೀವ್ ಮಾಡಲಿಲ್ಲ ಎಂದು ನಿನ್ನೆ ಪಾಲಿಕೆ ಕಾಂಗ್ರೆಸ್ ಸದಸ್ಯರು ಆರೋಪಿಸಿದ್ದರು. ಈ ಆರೋಪಕ್ಕೆ ಶಾಸಕ ತನ್ವೀರ್ ಸೇಠ್ ಇದೀಗ ಸ್ಪಷ್ಟನೆ  ನೀಡಿದ್ದಾರೆ.jk

ಈ ಕುರಿತು ಮಾತನಾಡಿರುವ ಶಾಸಕ ತನ್ವೀರ್ ಸೇಠ್, ಸಿದ್ದರಾಮಯ್ಯ 16 ಬಾರಿ ಕಾಲ್ ಮಾಡಿದಾರೆ. ಆಸಮಯದಲ್ಲಿ ನಾನು ಪಾಲಿಕೆ ಸದನದ ಒಳಗಿದ್ದೆ. ಅಲ್ಲಿ ಮೊಬೈಲ್ ತೆಗೆದುಕೊಂಡು ಹೋಗುವ ಆಗಿಲ್ಲ. ಹಾಗಾಗಿ ಅವರ ಕರೆ ಸ್ವೀಕರಿಸಲು ಆಗಿಲ್ಲ. ಈ ಬಗ್ಗೆ ಈಗಾಗಲೇ ಕೆಪಿಸಿಸಿ ಅಧ್ಯಕ್ಷರಿಗೆ ತಿಳಿಸಿದ್ದೇನೆ ಎಂದು ಸ್ಪಷ್ಟನೆ ನೀಡಿದರು.

ಪಾಲಿಕೆ ಮೇಯರ್ ಚುನಾವಣೆಯಲ್ಲಿ ಜೆಡಿಎಸ್ ಜತೆ ಮೈತ್ರಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ತನ್ವೀರ್ ಸೇಠ್, ಗಂಡು ಮಗು ಆಗಿಲ್ಲ ಹೆಣ್ಣು ಮಗು ಆಗಿದೆ. ಗಂಡು ಮಗು ಆದ್ರೆ ಓಕೆ ಹೆಣ್ಣು ಮಗು ಬೇಡ ಅಂದರೆ ನಾನು ಒಪ್ಪಲ್ಲ. ಒಂದು ವೇಳೆ ಬಿಜೆಪಿ ಅಧಿಕಾರಕ್ಕೆ ಬಂದಿದ್ದರೆ ಅದನ್ನು ನನ್ನ ಮೇಲೆ ಹಾಕುತ್ತಿದ್ದರು. ಸೋಮವಾರ ಡಿ ಕೆ ಶಿವಕುಮಾರ್ ಭೇಟಿ ಮಾಡಿ ವರದಿ ನೀಡುವೆ. ಪಕ್ಷಕ್ಕಿಂತ ದೊಡ್ಡದು ಯಾವುದು ಇಲ್ಲ. ಏನೇ ಇದ್ರು ಪಕ್ಷಕ್ಕೆ ಮಾತ್ರ ನಾನು ಉತ್ತರದಾಯಿ ಎಂದರು.siddaramaiah-called-not-received-mla-tanveer-sait

ಕಾಂಗ್ರೆಸ್ ಜೆಡಿಎಸ್ ಮೈತ್ರಿ ಆಗಬಾರದು ಅನ್ನೋ ಬಗ್ಗೆ ಡೀಲ್ ಆಗಿದ್ದು ತನಿಖೆಯಾಗಬೇಕು…

ನಾನು ಮಾರಾಟದ ವಸ್ತುವಲ್ಲ. ರಾಜಕೀಯ ತತ್ವ ಸಿದ್ದಾಂತ ಉಳಿಸಿಕೊಂಡಿದ್ದೇನೆ. ಅದಕ್ಕಾಗಿ ಹಲವು ತ್ಯಾಗ ಮಾಡಿದ್ದೇನೆ. ಕಾಂಗ್ರೆಸ್ ಜೆಡಿಎಸ್ ಮೈತ್ರಿ ಆಗಬಾರದು ಅನ್ನೋ ಬಗ್ಗೆ ಡೀಲ್ ಆಗಿದ್ದು ತನಿಖೆಯಾಗಬೇಕು. ಹಲವು ದಿನಗಳಿಂದ ನನ್ನ ವಿರುದ್ದ ಷಡ್ಯಂತ್ರ ನಡೆಯುತ್ತಿದೆ ಎಂದು ಶಾಸಕ ತನ್ವೀರ್ ಸೇಠ್  ಹೇಳಿದರು.

Key words: Siddaramaiah – called – not received-MLA-Tanveer Sait,