ಸುತ್ತೂರು ಶ್ರೀಗಳ ಟೆಲಿಫೋನ್ ‌ಕದ್ದಾಲಿಕೆ ಪ್ರಕರಣ: ಸಿಎಂ ಬಿ.ಎಸ್ ಯಡಿಯೂರಪ್ಪ ಪ್ರತಿಕ್ರಿಯಿಸಿದ್ದು ಹೀಗೆ..?

Promotion

ಮೈಸೂರು,ಅ,2,2019(www.justkannada.in): ಸುತ್ತೂರು ಶ್ರೀಗಳ ಟೆಲಿಫೋನ್ ‌ಕದ್ದಾಲಿಕೆ ಪ್ರಕರಣ ಕುರಿತು ‌ನನಗೆ ಮಾಹಿತಿಯಿಲ್ಲ. ಸಿಬಿಐ ತನಿಖೆ‌ ನಡೆಯುತ್ತಿದೆ. ಈ ಹಂತದಲ್ಲಿ ಪ್ರತಿಕ್ರಿಯೆ ನೀಡಲ್ಲ ಎಂದು ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದರು.

ಮೈಸೂರಿನಲ್ಲಿ ಇಂದು ಮಾತನಾಡಿದ  ಸಿಎಂ ಯಡಿಯೂರಪ್ಪ, ಟೆಲಿಫೋನ್ ಕದ್ದಾಲಿಕೆ ‌ಪ್ರಕರಣ ಸಂಬಂಧ ಈಗಾಗಲೇ ಸಿಬಿಐ‌ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಈ ಹಂತದಲ್ಲಿ ‌ಯಾವುದೇ ಪ್ರತಿಕ್ರಿಯೆ ‌ನೀಡುವುದು ಸರಿಯಲ್ಲ. ತನಿಖೆ ಪೂರ್ಣಗೊಂಡ ಬಳಿಕ ಯಾರೇ ತಪ್ಪು ಮಾಡಿದ್ದರೂ ಬಹಿರಂಗವಾಗಲಿದೆ ಎಂದರು.

ಬಂಡೀಪುರ ಅರಣ್ಯಪ್ರದೇಶ ವ್ಯಾಪ್ತಿಯಲ್ಲಿ ರಾತ್ರಿ ವಾಹನ ಸಂಚಾರಕ್ಕೆ ಸಂಬಂಧಿಸಿದಂತೆ ‌ನ್ಯಾಯಾಲಯದ ಸ್ಪಷ್ಟ ಆದೇಶವಿದೆ. ನಾನು ನ್ಯಾಯಾಲಯದ ಆದೇಶದ‌ ವಿರುದ್ಧ ಹೋಗಲು ಸಾಧ್ಯವಿಲ್ಲ. ರಾಹುಲ್ ಗಾಂಧಿ ಅವರಿಗೆ‌ ಕೋರ್ಟ್ ಆದೇಶದ ‌ಬಗ್ಗೆ ಮಾಹಿತಿ ಇಲ್ಲದಿರಬಹುದು. ಅವರು ಮಾಹಿತಿ ಪಡೆದುಕೊಳ್ಳಲಿ ಎಂದು ಸಿಎಂ ಬಿಎಸ್ ವೈ ಸಲಹೆ ನೀಡಿದರು.

Key words: phone tapping -case-  CM BS Yeddyurappa-reaction-mysore