“ಸಂಸದರಿಗೆ ಮಾಹಿತಿ ಕೊರತೆ ಇದೆ” : ಪ್ರತಾಪ್ ಸಿಂಹಗೆ ಶಾಸಕ‌ ಎಲ್.ನಾಗೇಂದ್ರ ಟಾಂಗ್

Promotion

ಮೈಸೂರು,ಜನವರಿ,31,2021(www.justkannada.in) : ಕಳೆದ ೨೦ ವರ್ಷಗಳಿಂದ ಸರಿಯಾದ ಕೆಲಸಗಳಾಗಿರಲಿಲ್ಲ. ಕೆಲಸ ಮಾಡೋಕೆ ನಾವೇ ಬರಬೇಕಾಯ್ತು. ಸಂಸದರು ಅಧಿಕಾರಿಗಳಿಂದ ಮಾಹಿತಿ ತೆಗೆದುಕೊಳ್ಳಬೇಕು. ನಾನು ಮುಡಾದಲ್ಲಿ ಸಾಕಷ್ಟು ಕೆಲಸ ಮಾಡಿದ್ದೇನೆ ಎಂದು ಶಾಸಕ‌ ಎಲ್.ನಾಗೇಂದ್ರ ಹೇಳಿದ್ದಾರೆ.jk

ಮುಡಾ ಸಭೆಯಲ್ಲಿ ಪ್ರತಾಪ್ ಸಿಂಹ ಹೇಳಿಕೆ ವಿಚಾರವಾಗಿ ಸಂಸದರಿಗೆ ಮಾಹಿತಿ ಕೊರತೆ ಇದೆ ಅನ್ನಿಸುತ್ತದೆ ಎಂದು ಪ್ರತಾಪ್ ಸಿಂಹಗೆ ಶಾಸಕ ಎಲ್.ನಾಗೇಂದ್ರ ಟಾಂಗ್ ನೀಡಿದ್ದಾರೆ.

ನನ್ನ ಅವಧಿಯಲ್ಲಿ ೫೦೦ ಕೋಟಿಯಷ್ಟು ಹಣ ತಂದು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ನಾನು ಮೂರು ಬಾರಿ ಪಾಲಿಕೆ ಸದಸ್ಯನಾದಾಗ, ಮುಡಾ ಅಧ್ಯಕ್ಷನಾದಾಗ ಅವರು ಇರಲಿಲ್ಲ. ಆ ದಿನಗಳಲ್ಲಿ ಕೆಲಸ ಮಾಡಿದ್ದರಿಂದಲೇ ನಾನು ಈಗ ಶಾಸಕನಾಗಿರೋದು. ಸಂಸದರು ಹಿಂದಿನ ಮಾಹಿತಿಯನ್ನ ಪಡೆದುಕೊಳ್ಳಬೇಕು ಎಂದಿದ್ದಾರೆ.

ಇವರು ಸಂಸದರಾಗಿ ೭ ವರ್ಷಗಳಾಗಿದೆ. ಇವರು ಬಂದ ಮೇಲೆ ಏನು ಬದಲಾಗಿದೆ ಅನ್ನೋದು ಮಾಹಿತಿ ನಮಗೆ, ಅವರಿಗೆ, ಎಲ್ಲರಿಗೂ ಗೊತ್ತಿದೆ. ಆದ್ದರಿಂದ ಮೈಸೂರು ನಗರಕ್ಕೆ ಯಾರು ಶಕ್ತಿ ಮೀರಿ ಎಷ್ಟು ಕೆಲಸ ಮಾಡಿದ್ದೇವೆ ಅನ್ನೋದು ಗೊತ್ತಿದೆ ಎಂದು ಕಿಡಿಕಾರಿದ್ದಾರೆ.MP,Information,shortage,Pratap shinma,legislator,L.Nagendra,Tong

ನಾವು ಸಂಸದರು ಸೇರಿದಂತೆ ಮೈಸೂರಿನ ಎಲ್ಲರಿಗೂ ನಮ್ಮ ಕೆಲಸಗಳ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ. ನಾವು ಸಹ ಸಾಕಷ್ಟು ಅಭಿವೃದ್ಧಿ ಮಾಡುತ್ತಿದ್ದೇವೆ. ಪಾಲಿಕೆ ಸದಸ್ಯ, ಎಂ ಎಲ್ ಎ ಎಲ್ಲರಿಗೂ ಎಷ್ಟು ಸಾಧ್ಯ ಅಷ್ಟು ಕೆಲಸ ಮಾಡುತ್ತಿದ್ದೇವೆ. ಅವರೇ ನಮ್ಮ ಕೆಲಸಗಳ ಬಗ್ಗೆ ಸಾಕಷ್ಟು ಬಾರಿ ವೇದಿಕೆಗಳಲ್ಲಿ ಹೊಗಳಿದ್ದಾರೆ. ನಮ್ಮ ಕೆಲಸಗಳ ಬಗ್ಗೆ ಅವರಿಗೆ ಗೊತ್ತಿದೆ ಎಂದು ತಿಳಿಸಿದ್ದಾರೆ.

key words : MP-Information-shortage-Pratap shinma-legislator-L.Nagendra-Tong