ಅಂಗೈ ಹುಣ್ಣಿಗೆ ಕನ್ನಡಿ ಬೇಕೆ..? ಟ್ವಿಟ್ಟರ್ ನಲ್ಲಿ ಡಿ.ಕೆ ಶಿವಕುಮಾರ್ ಕುಟುಕಿದ ಬಿ.ವೈ.ವಿಜಯೇಂದ್ರ…

Promotion

ಬೆಂಗಳೂರು, ಆಗಸ್ಟ್, 21, 2020(www.justkannada.in): ಡಿ.ಜೆ.ಹಳ್ಳಿ, ಕೆ.ಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರಿಗೆ  ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಟ್ವಿಟ್ಟರ್ ನಲ್ಲಿ ಕುಟುಕಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಬಿ.ವೈ ವಿಜಯೇಂದ್ರ, ಮಾನ್ಯ ಡಿ.ಕೆ ಶಿವಕುಮಾರ್ ಅವರೇ ಅಂಗೈ ಹುಣ್ಣಿಗೆ ಕನ್ನಡಿ ಬೇಕೆ…? ಎಂಬಂತೆ ಗಲಭೆ ಕ್ರೌರ್ಯಕ್ಕೆ ತುತ್ತಾದ ನಿಮ್ಮ ಶಾಸಕರೇ ಇದು ಸ್ಥಳೀಯ ಕಾಂಗ್ರೆಸ್ ಮುಖಂಡರ ಕೈವಾಡ ಎಂದು ಹೇಳಿದ್ದಾರೆ.   ಈ ಹೇಳಿಕೆಯಿಂದ  ವಿಚಲಿತರಾಗಿರುವ ನೀವು ಇದೀಗ ಪೊಲೀಸ್ ಅಧಿಕಾರಿಗಳನ್ನ ಬೆದರಿಸುವ ಮಾರ್ಗ ತುಳಿದಿದ್ದೀರಿ. ಇದು ನಿಮ್ಮ ಹತಾಶೆ ಹಾಗೂ ಭಂಡತನವನ್ನ ತೋರಿಸುತ್ತದೆ ಟೀಕಿಸಿದ್ದಾರೆ.

ಅಂಗೈ ಹುಣ್ಣಿಗೆ ಕನ್ನಡಿ ಬೇಕೆ ಡಿಕೆಶಿ ಅವರೇ ಎಂದು ಟ್ವೀಟ್ ಮೂಲಕ ಪ್ರಶ್ನಿಸಿರುವ ವಿಜಯೇಂದ್ರ, ನಿಮ್ಮ ಹತಾಶೆ, ಭಂಡತನದಿಂದ ಪೊಲೀಸರನ್ನು ಬೆದರಿಸುವ ಕಾರ್ಯಮಾಡುತ್ತಿದ್ದೀರಿ ಎಂದು ಕಿಡಿಕಾರಿದ್ದಾರೆ.

Key words :Local-Congress-leaders-responsible-Bangalore riots