ಶಿರಾ ಬೈ ಎಲೆಕ್ಷನ್: ಕೊರೊನಾ ನಿಯಮ ಉಲ್ಲಂಘಿಸಿದ್ರೆ ಕಾನೂನು ಕ್ರಮ- ಡಿಸಿ ಡಾ.ರಾಕೇಶ್ ಎಚ್ಚರಿಕೆ

Promotion

ತುಮಕೂರು,ಅಕ್ಟೊಂಬರ್,01,2020(www.justkannada.in)  :  ನವೆಂಬರ್ 3ರಂದು ಶಿರಾ ಉಪಚುನಾವಣೆ ಹಿನ್ನೆಲೆ ರಾಜಕೀಯ ಪಕ್ಷಗಳು ಕೊರೊನಾ ನಿಯಮ ಕಡ್ಡಾಯವಾಗಿ ಪಾಲಿಸಬೇಕು. ನಿಯಮ ಉಲ್ಲಂಘಿಸಿದರೆ ಕಾನೂನು ರೀತಿ ಕ್ರಮ ಎಂದು ತುಮಕೂರು ಜಿಲ್ಲಾಧಿಕಾರಿ ಡಾ.ರಾಕೇಶ್ ಹೇಳಿದ್ದಾರೆ.jk-logo-justkannada-logoಶಿರಾ ಉಪಚುನಾವಣೆ ದಿನಾಂಕ ಘೋಷಣೆಯಾದ ಹಿನ್ನೆಲೆಯಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಅವರು, ರಾಜಕೀಯ ಪಕ್ಷದ ನಾಯಕರು ಕಡ್ಡಾಯವಾಗಿ ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದಿದ್ದಾರೆ.Legal-action-corona-violates-law-Tumkur DC-Dr.Rakesh-warnsಒಳಾಂಗಣ ಕಾರ್ಯಕ್ರಮದಲ್ಲಿ 200 ಮಂದಿ ಸೇರುವುದಕ್ಕೆ ಅವಕಾಶ ನೀಡಿದ್ದು, ಹೊರಾಂಗಣ ಸಭೆ, ಸಮಾರಂಭದಲ್ಲಿ ಜನಸಂಖ್ಯೆಗೆ ಮಿತಿ ಇಲ್ಲ. ಆದರೆ, ಕೊರೊನಾ ಮಾರ್ಗಸೂಚಿ ಉಲ್ಲಂಘಿಸಿದರೆ ಕಾನೂನು ರೀತಿ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

key words : Legal-action-corona-violates-law-Tumkur DC-
Dr.Rakesh-warns