ಅಕ್ರಮ ಬಡ್ಡಿದಂಧೆ ನಡೆಸುತ್ತಿದ್ದ ಉದ್ಯಮಿ ಮನೆ ಮೇಲೆ ಪೊಲೀಸರಿಂದ ದಾಳಿ….

ಬೆಂಗಳೂರು,ಡಿಸೆಂಬರ್,17,2020(www.justkannada.in):  ಅಕ್ರಮ ಬಡ್ಡಿದಂಧೆ ನಡೆಸುತ್ತಿದ್ದ ಉದ್ಯಮಿ ಮನೆ ಮೇಲೆ ಬೆಂಗಳೂರಿನ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.Teachers,solve,problems,Government,bound,Minister,R.Ashok

ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದ ಉದ್ಯಮಿ ಗಂಗೇಗೌಡ ಎಂಬಾತನೇ ಅಕ್ರಮ ಬಡ್ಡಿದಂಧೆಯಲ್ಲಿ ತೊಡಗಿದ್ದ ಎನ್ನಲಾಗಿದೆ. ಜಮೀನು ಪತ್ರ ಪಡೆದು ರೈತರಿಗೆ ಹಣ ನೀಡಿ ಅಕ್ರಮ ಬಡ್ಡಿ ದಂಧೆ ನಡೆಸುತ್ತಿದ್ದ. ರೈತರಿಗೆ ಧಮ್ಕಿ ಹಾಕಿ ರೈತರಿಂದ ಜಮೀನು ನೊಂದಾಯಿಸಿಕೊಳ್ಳುತ್ತಿದ್ದ ಆರೋಪ ಕೇಳಿ ಬಂದಿದೆ.

police-raid-home-businessman-illegal-interest-rate
ಕೃಪೆ: internet

ಈ ಕುರಿತು ರೈತ ಮಹದೇವೆ ಎಂಬುವವರು ದೂರು ನೀಡಿದ್ದರು. ರೈತ ಮಹದೇವ್ ದೂರಿನ ಮೇರೆಗೆ ನೆಲಮಂಗಲ ಡಿವೈಎಸ್ ಪಿ ಜಗದೀಶ್ ಅವರ ನೇತೃತ್ವದಲ್ಲಿ  ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

Key words: Police- raid- home -businessman – illegal- interest rate