Wednesday, September 30, 2026

BDA Apartments

ಎಕ್ಸ್’ಪ್ರೆಸ್ ಹೈವೇ ಚಾಲಕರೇ ಎಚ್ಚರ! ಫಾಸ್ಟ್ ಟ್ಯಾಗ್’ನಿಂದಲೇ ದಂಡದ ಹಣ ವಸೂಲ...
Home Front Page ಎಕ್ಸ್’ಪ್ರೆಸ್ ಹೈವೇ ಚಾಲಕರೇ ಎಚ್ಚರ! ಫಾಸ್ಟ್ ಟ್ಯಾಗ್’ನಿಂದಲೇ ದಂಡದ ಹಣ ವಸೂಲಿಗೆ ಪೊಲೀಸ್ ಇಲಾಖೆ ಯೋಜನೆ!

ಎಕ್ಸ್’ಪ್ರೆಸ್ ಹೈವೇ ಚಾಲಕರೇ ಎಚ್ಚರ! ಫಾಸ್ಟ್ ಟ್ಯಾಗ್’ನಿಂದಲೇ ದಂಡದ ಹಣ ವಸೂಲಿಗೆ ಪೊಲೀಸ್ ಇಲಾಖೆ ಯೋಜನೆ!

ಬೆಂಗಳೂರು, ಜುಲೈ 26, 2023 (www.justkannada.in): ಪಾಸ್ ಸ್ಟ್ಯಾಗ್ ನಲ್ಲೇ ದಂಡ ವಸೂಲಿಗೆ ಪೊಲೀಸ್ ಇಲಾಖೆ ಯೋಜನೆ ರೂಪಿಸುತ್ತಿದೆ.

ಹೌದು. ಬೆಂಗಳೂರು -ಮೈಸೂರು ಎಕ್ಸ್ಪ್ರೆಸ್ ಹೈವೇಯಲ್ಲಿ ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಮತ್ತಷ್ಟು ಕಠಿಣ ಕ್ರಮಕ್ಕೆ ಪೊಲೀಸ್ ಇಲಾಖೆ ಕ್ರಮ ಕೈಗೊಂಡಿದೆ. ಪಾಸ್ ಸ್ಟ್ಯಾಗ್ ನಲ್ಲೇ ದಂಡ ವಸೂಲಿಗೆ ಪೊಲೀಸ್ ಇಲಾಖೆ ಯೋಜನೆ ರೂಪಿಸುತ್ತಿದೆ.

ವೇಗಮಿತಿ ಮೀರಿದಲ್ಲಿ ಸ್ಥಳದಲ್ಲೇ ವಾಹನಗಳ ಫಾಸ್ಟ್ ಟ್ಯಾಗ್ ನಿಂದ ದಂಡದ ಹಣ ಸರ್ಕಾರದ ಖಜಾನೆಗೆ ಪಾವತಿಯಾಗುವ ರೀತಿಯಲ್ಲಿ ವ್ಯವಸ್ಥೆ ರೂಪಿಸಲಾಗುತ್ತಿದೆ.

ಹೆದ್ದಾರಿಯಲ್ಲಿ ವಾಹನಗಳ ವೇಗದ ಮಿತಿ 100 ಕಿಲೋಮೀಟರ್ ನಿಗದಿಪಡಿಸಲಾಗಿದೆ. ವಾಹನ ಸಂಚರಿಸುವಾಗ ಅದರ ವೇಗ ಎಷ್ಟಿದೆ ಎನ್ನುವ ಮಾಹಿತಿ ಡಿಸ್ಪ್ಲೇ ಆಗುತ್ತಿದ್ದು, ನಿಯಮ ಉಲ್ಲಂಘಿಸಿದ ವಾಹನದ ಫೋಟೋ ಟೋಲ್ ಪ್ಲಾಜಾ ಮೂಲಕ ಪೊಲೀಸರಿಗೆ ಲಭ್ಯವಾಗುತ್ತದೆ.

ಇದೀಗ ವೇಗಮಿತಿ ಮೀರಿದಲ್ಲಿ ಸ್ಥಳದಲ್ಲೇ ವಾಹನಗಳ ಫಾಸ್ಟ್ ಟ್ಯಾಗ್ ನಿಂದ ದಂಡದ ಹಣ ಸರ್ಕಾರದ ಖಜಾನೆಗೆ ಪಾವತಿಯಾಗುವ ರೀತಿಯಲ್ಲಿ ವ್ಯವಸ್ಥೆ ರೂಪಿಸಲಾಗುತ್ತಿದೆ.