ಮೈಸೂರು,ಅಕ್ಟೋಬರ್,10,2025 (www.justkannada.in): ಮೈಸೂರಿನಲ್ಲಿ ಹಾಡ ಹಗಲೇ ವೆಂಕಟೇಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನರನ್ನ ಬಂಧನ ಮಾಡಿದ್ದೇವೆ ಎಂದು ಮೈಸೂರು ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್, ವೆಂಕಟೇಶ್ ಹತ್ಯೆಯಲ್ಲಿ 6 ಜನ ಭಾಗಿಯಾಗಿದ್ದಾರೆ. ಈಗಾಗಲೇ ಅವರನ್ನು ಅರೆಸ್ಟ್ ಮಾಡಿದ್ದೇವೆ. ಧ್ರುವ ಕುಮಾರ್ ಒಬ್ಬ ಮಂಡ್ಯ, ಉಳಿದ 5 ಜನ ಮೈಸೂರಿನವರು. ಹಾಲಪ್ಪ ಹಾಗೂ ಮೃತ ವೆಂಕಟೇಶ್ ನಡುವೆ ಶೀತಲ ಸಮರ ಇತ್ತು. ಒಂದೇ ಗ್ರೂಪ್ ಆದರೂ ಸಹ ನಾನಾ ನೀನಾ ಅನ್ನೋ ವಿಚಾರಕ್ಕೆ ಕೊಲೆ ಆಗಿದೆ. ಈ ಹಿಂದೆ ನಡೆದ ಕಾರ್ತಿಕ್ ಕೊಲೆಗೂ ಇದಕ್ಕೂ ಲಿಂಕ್ ಇದೆಯಾ ಅಂತ ನೋಡುತ್ತಿದ್ದೇವೆ. ಸಣ್ಣ ಪುಟ್ಟ ಫೈನಾನ್ಸ್ ಮಾಡುತ್ತಿದ್ದ ಅಂತ ಗೊತ್ತಾಗಿದೆ ಎಂದು ಮಾಹಿತಿ ನೀಡಿದರು.
ಬಾಲಕಿ ಅತ್ಯಾಚಾರ ಕೊಲೆ ಕೇಸ್: ಆರೋಪಿ ಅರೆಸ್ಟ್
ನಿನ್ನೆ ನಜರಾಬಾದ್ ಲಿಮಿಟ್ ಅಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಕೊಲೆ ಆಗಿದೆ. ಇದರ ಸಂಬಂಧ ನಾವು ಆರೋಪಿ ಅರೆಸ್ಟ್ ಮಾಡಿದ್ದೇವೆ. ನಿನ್ನೆ ಆರೋಪಿ ಕರೆದುಕೊಂಡು ಬರುತ್ತಿದ್ದ ವೇಳೆ ಆರೋಪಿ ಸಿದ್ದಲಿಂಗಪುರ ಅಂತ ಹೇಳಿದ್ದಾನೆ. ಅಲ್ಲಿ ಕರೆದುಕೊಂಡು ಹೋದ ಸಂದರ್ಭದಲ್ಲಿ ನಮ್ಮ ಸಿಬ್ಬಂದಿ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಆ ಸಂದರ್ಭದಲ್ಲಿ ನಮ್ಮವರು ಗುಂಡು ಹಾರಿಸಿದ್ದಾರೆ. ಈತನ ಮೇಲೆ ಹಳೆಯ ಕೇಸ್ ಕೂಡ ಇದೆ. ಜಾಮೀನಿನ ಮೇಲೆ ಆತ ಹೊರಗಡೆ ಬಂದಿದ್ದ. ನಿನ್ನೆ ಮಗು ಮಲಗಿದ್ದ ವೇಳೆ ಎತ್ತುಕೊಂಡು ಹೋಗಿ ಕೃತ್ಯವೆಸಗಿದ್ದಾನೆ. ಆತ ಮಾದಕ ವ್ಯಸನಿ ಅಂತ ಗೊತ್ತಾಗಿದ್ದು, ಕಾನೂನು ಪ್ರಕಾರ ಕ್ರಮ ತೆಗೆದುಕೊಂಡಿದ್ದೇವೆ ಎಂದು ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಹೇಳಿದ್ದಾರೆ.
Key words: Mysore, Gilki Venkatesh, Girl, murder case, Police Commissioner, Seema Latkar