Saturday, August 22, 2026

BDA Apartments

Home Front Page ಇಂದು ಪ್ರಧಾನಿ ಮೋದಿ ಮೈಸೂರಿನಲ್ಲಿ ರೋಡ್ ಶೋ: ಬಿಜೆಪಿಯಿಂದ ಸಕಲ ಸಿದ್ಧತೆ

ಇಂದು ಪ್ರಧಾನಿ ಮೋದಿ ಮೈಸೂರಿನಲ್ಲಿ ರೋಡ್ ಶೋ: ಬಿಜೆಪಿಯಿಂದ ಸಕಲ ಸಿದ್ಧತೆ

ಮೈಸೂರು, ಏಪ್ರಿಲ್ 30, 2023 (www.justkannada.in): ಇಂದು ಪ್ರಧಾನಿ ನರೇಂದ್ರ ಮೋದಿ ಮೈಸೂರಿಗೆ ಆಗಮಿಸಲಿದ್ದು ನಗರಲ್ಲಿ ರೋಡ್ ಶೋ ನಡೆಸಲಿದ್ದಾರೆ.

ಸಂಜೆ 5 ಗಂಟೆ ಸುಮಾರಿಗೆ ಪ್ರಧಾನಿ ಮೋದಿ ಮೈಸೂರಿನ ಗನ್ ಹೌಸ್ ಸರ್ಕಲ್ ನಿಂದ ರೋಡ್ ಶೋ ಆರಂಭಿಸಲಿದ್ದಾರೆ. ಹಾಸನದ ಬೇಲೂರಿನಿಂದ ನೇರವಾಗಿ ಮೈಸೂರಿಗೆ  ಆಗಮಿಸಲಿದ್ದಾರೆ.

ಮೈಸೂರಿನ ಸಂಪ್ರದಾಯದಂತೆ ನೂರಕ್ಕೂ ಹೆಚ್ಚು ನಾದ ಸ್ವರ, ಪೂರ್ಣಕುಂಭಗಳೊಂದಿಗೆ ಪ್ರಧಾನಿ ಮೋದಿಯವರನ್ನ ಅದ್ದೂರಿಯಾಗಿ ಸ್ವಾಗತ ಮಾಡಲಾಗುತ್ತದೆ.

ಮೈಸೂರಿನ ದಸರಾ ಸಾಂಪ್ರದಾಯಿಕ ಮಾದರಿಯಲ್ಲಿ ಮೈಸೂರಿನ ಸಂಪ್ರದಾಯದ ಉಡುಗೆ ತೊಡುಗೆಗಳ ಮೂಲಕ ಅವರನ್ನ ಸ್ವಾಗತಿಸಲಾಗುತ್ತದೆ. ಗನ್ ಹೌಸ್ ನಿಂದ ಪಾಠಶಾಲೆ, ಕೆ.ಆರ್ ಸರ್ಕಲ್, ಸಯ್ಯಾಜಿರಾವ್ ರಸ್ತೆ ಮೂಲಕ ಮಿಲೇನಿಯಂ ಸರ್ಕಲ್ ವರೆಗೂ ರೋಡ್ ಶೋ ನಡೆಯಲಿದೆ.

ಐದು ಸ್ಥಳಗಳಲ್ಲಿ ಹಿರಿಯ ನಾಗರೀಕರು ಕುಳಿತು ರೋಡ್ ಶೋ ನೋಡಲು ವ್ಯವಸ್ಥೆ ಮಾಡಲಾಗುತ್ತಿದೆ. ಪೂರ್ಣಕುಂಭದ ಸ್ವಾಗತಕ್ಕೂ ವ್ಯವಸ್ಥೆ ಮಾಡಲಾಗಿದೆ. ಒಟ್ಟು ನಾಲ್ಕು ಕಿ.ಮೀ ರೋಡ್ ಶೋ ನಡೆಯಲಿದ್ದು,  ಒಂದು ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇದೆ.