ಉಡುಪಿ,ನವೆಂಬರ್,28,2025 (www.justkannada.in): ಜಲ ಸಂರಕ್ಷಣೆ ಸಸಿ ನೆಡುವಿಕೆ ಬಡವರಿಗೆ ಸಹಾಯ ಮಾಢುವುದು ಸ್ವದೇಶೀ ಉತ್ಪನ್ನಗಳ ಬಳಕೆ, ಯೋಗಕ್ಕೆ ಹೆಚ್ಚು ಆದ್ಯತೆ ನೀಡಬೇಕು. ಈ ಮೂಲಕ ನಾವೆಲ್ಲ ಕೆಲವೊಂದು ಸಂಕಲ್ಪಗಳನ್ನ ಮಾಡಬೇಕು ಎಂದು ಪ್ರಧಾನಿ ಮೋದಿ ಕರೆ ನೀಡಿದರು.
ಇಂದು ಉಡುಪಿ ಶ್ರೀಕೃಷ್ಣಮಠಕ್ಕೆ ಭೇಟಿ ನೀಡಿ ಕನಕನಕಿಂಡಿಯಲ್ಲಿ ಶ್ರೀಕೃಷ್ಣನ ದರ್ಶನ ಪಡೆದು ಗೀತಾಕಂಠ ಪಾರಾಯಣದಲ್ಲಿ ಪಾಲ್ಗೊಂಡು ನಂತರ ಮಾತನಾಡಿದ ಪ್ರಧಾನಿ ಮೋದಿ, ಪ್ರಮುಖ ಧಾರ್ಮಿಕ ಮಠಗಳಲ್ಲಿ ಉಡುಪಿ ಶ್ರೀಕೃಷ್ಣ ಮಠವೂ ಒಂದು. ಉಡುಪಿ ಗುಜರಾತ್ ನಡುವೆ ವಿಶೇಷ ಸಂಬಂಧವಿದೆ. ಉಡುಪಿಗೆ ಬರೋದು ಅಂದರೆ ನನಗೆ ಬಹಳ ಸಂತಸ. ಉಡುಪಿ ಬಿಜೆಪಿಯ ಕರ್ಮಭೂಮಿಯಾಗಿದೆ. ಬಿಜೆಪಿಗೆ ದಿ. ವಿ.ಎಸ್ ಆಚಾರ್ಯ ಅವರ ಕೊಡುಗೆ ಅಪಾರ. ಕಲಿಯುಗದಲ್ಲಿ ಭಗವಂತನ ನಾಮಸ್ಮರಣೆಯಿಂದ ಮೋಕ್ಷ ಸಾಧ್ಯ. ಎಂದರು.
ಪ್ರತಿಯೊಬ್ಬ ವ್ಯಕ್ತಿಗೆ ತನ್ನದೇ ಆದ ಕರ್ತವ್ಯವಿದೆ. ರಾಮಮಂದಿರದ 1 ದ್ವಾರ ಮಧ್ವಾಚಾರ್ಯರ ಹೆಸರಿನಲ್ಲಿದೆ. ಅದು ಕರ್ನಾಟಕದ ಜನತೆಗೆ ಹೆಮ್ಮೆಯ ವಿಷಯವಾಗಿದೆ ಎಂದರು.
ಇದೇ ವೇಳೆ ಅಪರೇಷನ್ ಸಿಂಧೂರದ ಬಗ್ಗೆ ಪ್ರಸ್ತಾಪಿಸಿ ಕಾಂಗ್ರೆಸ್ ಗೆ ಪರೋಕ್ಷ ಟಾಂಗ್ ಕೊಟ್ಟ ಪ್ರಧಾನಿ ಮೋದಿ, ನಮ್ಮ ಸುದರ್ಶನ ಚಕ್ರ ವೈರಿಗಳಿಗೆ ತಕ್ಕಪಾಠ ಕಲಿಸಿದೆ. ಈ ಹಿಂದೆ ಉಗ್ರರ ಕೃತ್ಯ ನಡೆಸಿದಾಗ ಸರ್ಕಾರ ಕೈ ಕಟ್ಟಿ ಕುಳಿತಿತ್ತು. ಆದರೆ ನಾವು ಪಹಲ್ಗಾಮ್ ದಾಳಿಯಲ್ಲಿ ತಕ್ಕ ಪಾಠ ಕಲಿಸಿದ್ದೇವೆ. ಈಗಿನ ಹೊಸ ಭಾರತ ಉಗ್ರ ಪೋಷಕರಿಗೂ ತಕ್ಕ ಉತ್ತರ ನೀಡಿದೆ. .ಪಿಎ ಅವಾಸ್ ಸೇರಿ ಹಲವು ಯೋಜನೆಗಳನ್ನ ತಂದಿದ್ದೇವೆ. ನೈಸರ್ಗಿಕ ಕೃಷಿ ಒತ್ತು ನೀಡಬೇಕಿದೆ. ಪಾಂಡು ಲಿಪಿ ಸಂರಕ್ಷಣೆ ಮಾಡಬೇಕು ಎಂದರು.
Key words: : PM Modi, Sri Krishna Math, Udupi







