ಮನ್ ಕೀ ಬಾತ್’ನಲ್ಲಿ ವೈದ್ಯರ ಜತೆ ಪ್ರಧಾನಿ ಮೋದಿ ಮಾತು

ಬೆಂಗಳೂರು, ಏಪ್ರಿಲ್ 25, 2021 (www.justkannada.in): ಇಂದು ಮಾಸಿಕ ಮನ್ ಕೀ ಬಾತ್;ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದಾರೆ. ಕೋವಿಡ್ ನಮ್ಮ ಧೈರ್ಯವನ್ನು ಪರೀಕ್ಷೆ ಮಾಡುತ್ತಿದೆ ಎಂದು ಪ್ರಧಾನಿ ಹೇಳಿದ್ದಾರೆ.

ಕೋವಿಡ್ 2ನೇ ಅಲೆ ತಡೆಯಲು ನಾನು ವಿವಿಧ ಕ್ಷೇತ್ರಗಳ ಗಣ್ಯರ ಜೊತೆ ಮಾತನಾಡುತ್ತಿದ್ದೇನೆ. ಲಸಿಕೆ ಉತ್ಪಾದನೆ, ವೈದ್ಯರ ಜೊತೆ ಮಾತನಾಡಿದ್ದೇನೆ ಎಂದು ತಿಳಿಸಿದ್ದಾರೆ.

ವಿಶೇಷ ಎಂದರೆ ಇಂದು ಕೆಲ ವೈದ್ಯರೊಂದಿಗೆ ಮೋದಿ ಮಾತುಕತೆ ನಡೆಸಿದರು.

ಕೋವಿಡ್ ಚಿಕಿತ್ಸೆಯಲ್ಲಿ ಮೂರು ವಿಧಗಳಿವೆ. ರೋಗಿಯ ಸೋಂಕಿನ ಲಕ್ಷಣದ ಮೇಲೆ ಇದನ್ನು ತೀರ್ಮಾನ ಮಾಡಲಾಗುತ್ತದೆ. ಸರ್ಕಾರ ನೀಡುವ ಸೂಚನೆಗಳನ್ನು ಜನರು ಪಾಲನೆ ಮಾಡಬೇಕು ಎಂದು ಮೋದಿ ಜತೆ ಮಾತನಾಡಿದ ಮುಂಬೈನ ವೈದ್ಯ ಶಶಾಂಕ್ ಕೋರಿದರು.

ಕೋವಿಡ್ ಲಸಿಕೆ ಪಡೆದ ಮೇಲೆಯೂ ಜನರಿಗೆ ಕೋವಿಡ್ ಸೋಂಕು ತಗುಲಬಹುದು. ಆದರೆ, ಸೋಂಕಿನ ತೀವ್ರತೆ ಕಡಿಮೆ ಇರುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಲಸಿಕೆ ಕುರಿತು ಹಲವು ಸುಳ್ಳು ವದಂತಿಗಳು ಹರಿದಾಡುತ್ತಿವೆ ಎಂದು ಡಾ. ನವೀದ್ ಹೇಳಿದರು.