ಡಬಲ್ ಇಂಜಿನ್ ಸರ್ಕಾರ ಇದೆ, ಎಲ್ಲಿ ಬೇಕಾದ್ರೂ ಓಡಾಡಲಿ- ಪ್ರಧಾನಿ ಮೋದಿ ರಾಜ್ಯ ಭೇಟಿಗೆ ಡಿ.ಕೆ ಶಿವಕುಮಾರ್ ವ್ಯಂಗ್ಯ.

ಬೆಂಗಳೂರು,ಫೆಬ್ರವರಿ,27,2023(www.justkannada.in): ಶಿವಮೊಗ್ಗ ಏರ್ ಪೋರ್ಟ್ ಉದ್ಘಾಟನೆ ಸೇರಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡುತ್ತಿದ್ದು ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.

ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿರುವ ಡಿ.ಕೆ ಶಿವಕುಮಾರ್, ರಾಜ್ಯದಲ್ಲಿ ಆಡಳಿತ ಮಾಡುವುದ ನಾವು . ಮೋದಿ, ಅಮಿತ್ ಶಾ ಬಂದು ಆಡಳಿತ ಮಾಡಲ್ಲ. ಮೋದಿ, ಅಮಿತ್ ಶಾ ಜಿಲ್ಲೆ ಪ್ರಚಾರಕ್ಕೆ ಬಂದು ಹೋಗಲಿ. ಇಲ್ಲಿ ಡಬಲ್ ಇಂಜಿನ್ ಸರ್ಕಾರ ಇದೆ . ಹೀಗಾಗಿ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಎಲ್ಲಿ ಬೇಕಾದರೂ ಓಡಾಡಲಿ ಎಂದು ಲೇವಡಿ ಮಾಡಿದರು.

Key words: PM –Modi- state- visit-KPCC-President -DK Shivakumar