ಏರ್ ಬೇಸ್ ಗೆ ಭೇಟಿ ನೀಡಿ ಯೋಧರ ಶೌರ್ಯ ಕೊಂಡಾಡಿದ ಪ್ರಧಾನಿ ಮೋದಿ

ಅದಂಪುರ,ಮೇ,13,2025 (www.justkannada.in): ಅಪರೇಷನ್ ಸಿಂಧೂರ ಯಶಸ್ವಿ, ಕದನ ವಿರಾಮ ಘೋಷಣೆಯಾದ ಬೆನ್ನಲ್ಲೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಳಿಗ್ಗೆ ಪಂಜಾಬ್ ನ ಆದಂಪುರ ಏರ್ ಬೇಸ್ ಗೆ ಭೇಟಿ ನೀಡಿ, ಯೋಧರ  ಜೊತೆ ಮಾತುಕತೆ ನಡೆಸಿದ್ದಾರೆ.

ಇಂದು ಬೆಳಗ್ಗೆ ಪ್ರಧಾನಿ ಮೋದಿ ಅವರು ಅದಂಪುರ ವಾಯುನೆಲೆಗೆ  ಭೇಟಿ ನೀಡಿ  ಧೈರ್ಯಶಾಲಿ ಯೋಧರೊಂದಿಗೆ ಸಂವಾದ ನಡೆಸಿದರು. ಅಪರೇಷನ್ ಸಿಂಧೂರ ಬಗ್ಗೆ ಮಾಹಿತಿ ಪಡೆದು ಯೋಧರ ಶೌರ್ಯವನ್ನ ಕೊಂಡಾಡಿದರು.

ಈ ಕುರಿತು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಪ್ರಧಾನಿ ಮೋದಿ,  ಇಂದು ಬೆಳಿಗ್ಗೆ, ನಾನು ಆದಂಪುರ ವಾಯುಪಡೆ ನಿಲ್ದಾಣಕ್ಕೆ ಹೋಗಿ ನಮ್ಮ ವೀರ ವಾಯು ಯೋಧರು ಮತ್ತು ಸೈನಿಕರನ್ನು ಭೇಟಿಯಾದೆ. ಕೆಚ್ಚದೆಯ ಯೋಧರು ಸೈನಿಕರನ್ನ ಭೇಟಯಾದೆ. ಇಡೀ ದೇಶ ನಮ್ಮ ಯೋಧರಿಗೆ ಅಭಾರಿಯಾಗಿರಲಿದೆ.  ಧೈರ್ಯ, ದೃಢನಿಶ್ಚಯ ಮತ್ತು ನಿರ್ಭಯತೆಯನ್ನು ಸಾರುವವರೊಂದಿಗೆ ಇರುವುದು ಬಹಳ ವಿಶೇಷ ಅನುಭವವಾಗಿತ್ತು. ನಮ್ಮ ಸಶಸ್ತ್ರ ಪಡೆಗಳು ನಮ್ಮ ರಾಷ್ಟ್ರಕ್ಕಾಗಿ ಮಾಡುವ ಎಲ್ಲದಕ್ಕೂ ಭಾರತವು ಅವರಿಗೆ ಶಾಶ್ವತವಾಗಿ ಕೃತಜ್ಞವಾಗಿದೆ ಎಂದು ತಿಳಿಸಿದ್ದಾರೆ.

Key words: PM Modi, visits, air base, praises, bravery, soldiers