ನವದೆಹಲಿ,ಅಕ್ಟೋಬರ್,1,2022(www.justkannada.in): ದೇಶದಲ್ಲಿ ಡಿಜಿಟಲ್ ಕ್ರಾಂತಿಗೆ ಇಂದು ಪ್ರಧಾನಿ ಮೋದಿ ಮುನ್ನಡಿ ಬರೆಯಲಿದ್ದು, ಬಹುನಿರೀಕ್ಷಿತ 5ಜಿ ಸೇವೆಗೆ ಇಂದು ಚಾಲನೆ ಸಿಗಲಿದೆ.![]()
ಇಂಡಿಯಾ ಮೊಬೈಲ್ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದಲ್ಲಿ 5G ಸೇವೆಗಳಿಗೆ ಚಾಲನೆ ನೀಡಲಿದ್ದಾರೆ. ಇಂದಿನಿಂದ ಹೈ ಸ್ಪೀಡ್ ಇಂಟರ್ ನೆಟ್ ಬಳಕೆಗೆ ಬರಲಿದೆ.
ಆರಂಭದಲ್ಲಿ ಆಯ್ದ ಕೆಲ ಮೆಟ್ರೋ ನಗರಗಳಲ್ಲಿ ಮಾತ್ರ 5ಜಿ ಸೇವೆ ಸಿಗಲಿದೆ. ಏಷ್ಯಾದ ಅತಿದೊಡ್ಡ ಟೆಲಿಕಾಂ, ಮಾಧ್ಯಮ ಮತ್ತು ತಂತ್ರಜ್ಞಾನ ವೇದಿಕೆಯಾಗಿರುವ ಇಂಡಿಯಾ ಮೊಬೈಲ್ ಕಾಂಗ್ರೆಸ್ ದೂರಸಂಪರ್ಕ ಇಲಾಖೆ ಮತ್ತು ಸೆಲ್ಯುಲರ್ ಆಪರೇಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಜಂಟಿಯಾಗಿ ಕಾರ್ಯಕ್ರಮ ಆಯೋಜನೆ ಮಾಡಿದ್ದು ಇದರಲ್ಲಿ 5ಜಿ ಲಾಂಚ್ ಆಗಲಿದೆ.
Key words: PM Modi -launches -5G -service -today.







