ಪ್ರಧಾನಿ ಮೋದಿ ʻಒಬಿಸಿ’ ವರ್ಗಕ್ಕೆ ಸೇರಿದವರಲ್ಲ: ‘ಕೈ’ ನಾಯಕ ರಾಹುಲ್ ಗಾಂಧಿ ಆರೋಪ.

ಒಡಿಶಾ,ಫೆಬ್ರವರಿ,8,2024(www.justkannada.in):  ಪ್ರಧಾನಿ ಮೋದಿ ಅವರು ಒಬಿಸಿ ವರ್ಗಕ್ಕೆ ಸೇರಿದವರಲ್ಲ. ಅವರು ತಮ್ಮ ಜಾತಿಯ ಬಗ್ಗೆ ಸುಳ್ಳು ಹೇಳಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಈ ಕುರಿತು ಇಂದು ಮಾತನಾಡಿದ ರಾಹುಲ್ ಗಾಂಧಿ, ನರೇಂದ್ರ ಮೋದಿ ಅವರು ಹಿಂದುಳಿದ ವರ್ಗದ ಕುಟುಂಬದಲ್ಲಿ ಜನಿಸಿಲ್ಲ ಮತ್ತು ಅವರು ತಮ್ಮನ್ನು ಒಬಿಸಿ ಎಂದು ಗುರುತಿಸಿಕೊಳ್ಳುವ ಮೂಲಕ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಪ್ರಧಾನಿ ಮೋದಿ ಇತರ ಹಿಂದುಳಿದ ಜಾತಿಗೆ ಸೇರಿದವರಲ್ಲ.  ಅವರು ಗುಜರಾತ್‌ನಲ್ಲಿ ತೆಲಿ ಜಾತಿಯಲ್ಲಿ ಜನಿಸಿದರು, ಸಮುದಾಯಕ್ಕೆ 2000ರಲ್ಲಿ ಬಿಜೆಪಿ ಒಬಿಸಿ ಟ್ಯಾಗ್ ನೀಡಿತು. ಅವರು ಜನರಲ್ ಕೆಟಗರಿಯಲ್ಲಿ ಜನಿಸಿದರು. ಅವರು ಒಬಿಸಿಯಲ್ಲಿ ಹುಟ್ಟಿಲ್ಲ, ಸಾಮಾನ್ಯ ಜಾತಿಯಲ್ಲಿ ಜನಿಸಿದ ಕಾರಣ ಅವರು ತಮ್ಮ ಇಡೀ ಜೀವನದಲ್ಲಿ ಜಾತಿ ಗಣತಿಯನ್ನು ನಡೆಸಲು ಬಿಡುವುದಿಲ್ಲ ಎಂದು ಕಿಡಿಕಾರಿದರು.

ಪ್ರಧಾನಿ ಒಬಿಸಿಗಳೊಂದಿಗೆ ಕೈಕುಲುಕುವುದಿಲ್ಲ, ಆದರೆ ಶತಕೋಟ್ಯಾಧಿಪತಿಗಳನ್ನು ಅಪ್ಪಿಕೊಳ್ಳುತ್ತಾರೆ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.

Key words: PM Modi -does not -belong – OBC -category – Rahul Gandhi- alleges