ಪಿಎಂ ಫಂಡ್, ಎಂಪಿ ಫಂಡ್ ನಿಂದ ಏನೇನು ಕೆಲಸ ಮಾಡಿದ್ದೀರಾ ಲೆಕ್ಕ ಕೊಡಿ- ಸಂಸದ ಪ್ರತಾಪ್ ಸಿಂಹಗೆ ರಾಜಾರಾಂ ಸವಾಲು.

ಮೈಸೂರು,ಮೇ,31,2021(www.justkannada.in):  ಕೊರೋನಾ ನಿರ್ವಹಣೆಗೆ ಖರ್ಚು ಮಾಡಿದ ಅನುದಾನದ ಹಣದ ಬಗ್ಗೆ ಮೈಸೂರು ಡಿಸಿ ರೋಹಿಣಿ ಸಿಂಧೂರಿ ಅವರಿಗೆ ಲೆಕ್ಕ ಕೇಳಿದ ಸಂಸದ ಪ್ರತಾಪ್ ಸಿಂಹಗೆ ಸವಾಲು ಹಾಕಿರುವ ಮೈಸೂರು ನಗರ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ರಾಜಾರಾಂ, ಪಿಎಂ ಫಂಡ್  ನಿಂದ, ಎಂ ಪಿ ಫಂಡ್ ನಿಂದ ಏನೇನು ಕೆಲಸ ಮಾಡಿದ್ದಿರಾ ಲೆಕ್ಕ ಕೊಡಿ ಎಂದು ಆಗ್ರಹಿಸಿದ್ದಾರೆ.jk

ನಗರದ ಇಂದಿರಾಗಾಂಧಿ ಕಾಂಗ್ರೆಸ್ ಭವನದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಮೈಸೂರು ನಗರ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ರಾಜಾರಾಂ, ಮೈಸೂರು ಜಿಲ್ಲಾಡಳಿತ 24 ಗಂಟೆ ಕೆಲಸ ಮಾಡುತ್ತಿದೆ. ವ್ಯಾಕ್ಸಿನೇಷನ್‌ ವಿಚಾರದಲ್ಲೂ ಮೈಸೂರು ಜಿಲ್ಲಾಡಳಿತ ಉತ್ತಮ ಸಾಧನೆ ಮಾಡಿದೆ. ಆದರೆ ಪ್ರತಾಪ್ ಸಿಂಹ ಜಿಲ್ಲಾಡಳಿತವನ್ನು ಲೆಕ್ಕ ಕೇಳುತ್ತಾರೆ. ಮೊದಲು ಅವರು ಏನು ಮಾಡಿದ್ದಾರೆ ಅದರ ಲೆಕ್ಕ‌ ಕೊಡಲಿ. ಮೈಸೂರು ಜಿಲ್ಲೆಯಲ್ಲಿ ನಿಮ್ಮ ಶಾಸಕರು ಸಂಸದರು ಎಷ್ಟು ಫಂಡ್ ನೀಡಿದ್ದೀರಾ.? ಯಾರಿಗೆ ನಿಮ್ಮ ಹಣದಲ್ಲಿ ಪುಡ್ ಕಿಟ್ ನೀಡಿದ್ದೀರಾ ಎಂಬುದರ ಲೆಕ್ಕ ಕೊಡಲಿ. ಇಲ್ಲವಾದಲ್ಲಿ ರಾಜೀನಾಮೆಗೆ ಆನ್ ಲೈನ್ ಅಭಿಯಾನ ಆರಂಭಿಸಬೇಕಾಗುತ್ತದೆ ಎಂದು ಕುಟುಕಿದರು.

ಡಿಎಚ್ ಒ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವರು ನಿಷೇಧಿತ ಪದ ಬಳಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ರಾಜಾರಾಂ, ಜಿಲ್ಲಾ ಉಸ್ತುವಾರಿ ಸಚಿವರ ಪದ ಬಳಕೆ ಸರಿಯಲ್ಲ. ಅವರು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು. ಅವರು ಕೆಲಸ ಕೇಳುವ ಅಧಿಕಾರ ಇದೆ‌. ಆದರೆ ಕೇಳುವ ರೀತಿ ಸರಿ ಇಲ್ಲ ಎಂದರು.

ಸಚಿವರು ಈ ಉನ್ನತ ಸ್ಥಾನದಲ್ಲಿರುವ ಅಧಿಕಾರಿಗಳನ್ನು ಈ ಸಮಯದಲ್ಲಿ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕಾಗಿದೆ, ಹಾಗೆಯೇ ಅವರುಗಳಿಗೆ ಪೂರ್ಣ ಸ್ವತಂತ್ರ ನೀಡಬೇಕಾಗಿದೆ, ಮೈಸೂರಿಗೆ ವಿವಿಧ ಎನ್ ಜಿಓ ಇತರೆ ಸಂಘ ಸಂಸ್ಥೆಗಳಿಂದ ಕೊಡುಗೆಗಳು ಬಂದಿವೆ,  ಇಡಿ  ಹಾಸ್ಪಿಟಲ್ ಗೆ ಆಕ್ಸಿಜನ್ ಕೊಟ್ಟಿರುವುದು ಆರ್ ಬಿಐ. ಸರ್ಕಾರದಿಂದ ಬಂದಿರುವ ಅದೆಷ್ಟೋ  ವೆಂಟಿಲೇಟರ್ ಗಳು ಗೋಡನ್ ನಲ್ಲಿ ಪ್ರಯೋಜನಕ್ಕೆ ಬಾರದೆ ಬಿದ್ದಿವೆ ಎಂದು ರಾಜಾರಾಂ ಆಕ್ರೋಶ ವ್ಯಕ್ತಪಡಿಸಿದರು.

Key words: PM Fund -MP Fund-congress-leader-Rajaram –challenges- MP Pratap simha