ಮೈಸೂರು,ಮೇ,29,2025 (www.justkannada.in): ರಂಗವಲ್ಲಿ ಮೈಸೂರು ಇದೇ ಮೇ 31ರ ಶನಿವಾರದಂದು ಕಲಾಮಂದಿರ ಆವರಣದಲ್ಲಿರುವ ಕಿರುರಂಗಮಂದಿರದಲ್ಲಿ ಬೆಂಗಳೂರು ಥಿಯೇಟರ್ ಕಲೆಕ್ಟಿವ್ ಸಂಸ್ಥೆಯ ಕಲಾವಿದರು ಅಭಿನಯಿಸುವ ‘ಲವ್ ಲೆಟರ್ಸ್ – ನಿನ್ನ ಪ್ರೀತಿಯ ನಾನು’ ನಾಟಕ ಪ್ರದರ್ಶನವನ್ನು ಆಯೋಜಿಸಿದೆ.
ಈ ನಾಟಕದಲ್ಲಿ ಕನ್ನಡ ಚಲನಚಿತ್ರ ರಂಗದ ಪ್ರತಿಭಾವಂತ ನಟ ಕಿಶೋರ್ ಕುಮಾರ್ ಹಾಗೂ ನಟಿ ಸಿರಿ ರವಿಕುಮಾರ್ ಅಭಿನಯಿಸಿದ್ದಾರೆ. ಎ.ಆರ್. ಗರ್ನಿ ರಚನೆಯ ಈ ನಾಟಕದ ರೂಪಾಂತರ ಮತ್ತು ನಿರ್ದೇಶನವನ್ನು ರಂಗಕರ್ಮಿ ವೆಂಕಟೇಶ್ ಪ್ರಸಾದ್ ನಿರ್ದೇಶಿಸಿದ್ದಾರೆ.
ಮೇ 31 ರಂದು ಸಂಜೆ 4 ಗಂಟೆಗೆ ಹಾಗೂ ಸಂಜೆ 7 ಗಂಟೆಗೆ ಎರಡು ಪ್ರದರ್ಶನಗಳನ್ನು ಏರ್ಪಡಿಸಿದ್ದು, ಪ್ರವೇಶ ದರ ರೂ.150-00 ನಿಗದಿಪಡಿಸಲಾಗಿದೆ. ಟಿಕೆಟ್ಟುಗಳಿಗಾಗಿ 9900182400 ಸಂಪರ್ಕಿಸಬಹುದು.
ವಿನ್ಯಾಸ: ಜಯಂತ್ ಜಿ. ನಿಶಾಂತ್ ಗುರುಮೂರ್ತಿ, ಬೆಳಕು: ಅರುಣ್ ಡಿ ಟಿ., ನಿರ್ಮಾಣ: ಸುಷ್ಮ, ನಿರ್ವಹಣೆ : ಭೈರವ ಸಹಾಯ: ಅವಿನಾಶ್ ಶಿವಪುರೆ.
Key words: ‘Love Letters –Ninna pritiya nanu, play, May 31, Mysore