Sunday, September 20, 2026

BDA Apartments

ವಿಮಾನ ದುರಂತ: ಎಟಿಸಿಗೆ ಪೈಲಟ್ ಕಳುಹಿಸಿದ್ದ ಕೊನೆಯ ಸಂದೇಶ ಬಯಲು BDA JK_Adv BDA Adv
Home Crime ವಿಮಾನ ದುರಂತ:  ಎಟಿಸಿಗೆ ಪೈಲಟ್ ಕಳುಹಿಸಿದ್ದ ಕೊನೆಯ ಸಂದೇಶ ಬಯಲು

ವಿಮಾನ ದುರಂತ:  ಎಟಿಸಿಗೆ ಪೈಲಟ್ ಕಳುಹಿಸಿದ್ದ ಕೊನೆಯ ಸಂದೇಶ ಬಯಲು

ಅಹಮದಾಬಾದ್, ಜೂನ್, 14,2025 (www.justkannada.in):  ಅಹಮದಾಬಾದ್​ ಮೇಘಾಶಿ ನಗರದಲ್ಲಿ ಏರ್ ಇಂಡಿಯಾ ವಿಮಾನ ಪತನಗೊಂಡು  241 ಜನ ಸಾವನ್ನಪ್ಪಿದ ಘಟನೆ ಸಂಬಂಧ ಇದೀಗ ಮಾಹಿತಿಯೊಂದು ಬೆಳಕಿಗೆ ಬಂದಿದೆ. ವಿಮಾನ ಅಪಘಾತಕ್ಕೂ ಮುನ್ನ ಪೈಲಟ್ ಸುಮಿತ್ ಸಭರ್ವಾಲ್  ಎಟಿಸಿಗೆ  ಕಳುಹಿಸಿದ್ದ ಸಂದೇಶ ಬಹಿರಂಗಗೊಂಡಿದೆ.

ಪೈಲಟ್ ಸುಮಿತ್ ಸಭರ್ವಾಲ್ ‘ಮೇಡೇ’ ಸಂದೇಶ ಮಾತ್ರವಲ್ಲದೆ ಇನ್ನೂ ಕೆಲವು ವಿಚಾರಗಳನ್ನು ಹೇಳಿದ್ದರು ಎಂಬುದು ಆಡಿಯೋ ಸಂದೇಶದಿಂದ ಗೊತ್ತಾಗಿದೆ. ಅಪಘಾತಕ್ಕೀಡಾದ ವಿಮಾನವನ್ನು ಕ್ಯಾಪ್ಟನ್ ಸುಮಿತ್ ಸಭರ್ವಾಲ್ ಮತ್ತು ಕಮಾಂಡರ್ ಕ್ಲೈವ್ ಕುಂದರ್ ನಿರ್ವಹಿಸುತ್ತಿದ್ದರು.

ಪೈಲಟ್ ಕೊನೆಯ ಸಂದೇಶವಿದು..

ಪೈಲಟ್ ಸುಮಿತ್ ಸಭರ್ವಾಲ್ ಅವರು ಕೊನೆಯದಾಗಿ, ‘ಮೇಡೇ, ಮೇಡೇ, ಮೇಡೇ’ ಎಂದು ಸಂದೇಶ ಕಳುಹಿಸಿದ್ದರು. ಅಲ್ಲದೆ, ‘ಟೇಕಾಫ್ ​ಗೆ ಸಾಕಷ್ಟು ಪ್ರೆಷರ್ ಸಿಗುತ್ತಿಲ್ಲ. ವಿದ್ಯುತ್ ಪೂರೈಕೆ ಕಡಿಮೆಯಾಗುತ್ತಿದೆ, ವಿಮಾನ ಟೇಕ್ ಆಫ್ ಆಗುತ್ತಿಲ್ಲ, ನಾವು ಬದುಕುಳಿಯುವುದಿಲ್ಲ’ ಎಂದು ಹೇಳಿದ್ದರಂತೆ.

ನಂತರ ವಿಮಾನವು ಎಟಿಸಿ ಮಾಡಿದ ಕರೆಗಳಿಗೆ ಪ್ರತಿಕ್ರಿಯಿಸಲಿಲ್ಲ. ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ವಿಮಾನವು ಏರ್​​​ಪೋರ್ಟ್​ ಪರಿಧಿಯ ಹೊರಗೆ ವೈದ್ಯಕೀಯ ಕಾಲೇಜು ಕಟ್ಟಡಕ್ಕೆ ಅಪ್ಪಳಿಸಿದ್ದು ಈ ದುರಂತದಲ್ಲಿ 241 ಜನ ಸಾವನ್ನಪ್ಪಿದ್ದಾರೆ. ಅಲ್ಲದೆ, ವೈದ್ಯಕೀಯ ಕಾಲೇಜು ಹಾಸ್ಟೆಲ್​​​ನಲ್ಲಿದ್ದವರೂ ಮೃತಪಟ್ಟಿದ್ದರು. ಒಟ್ಟಾರೆಯಾಗಿ ಈವರೆಗೆ ಮೃತಪಟ್ಟವರ ಸಂಖ್ಯೆ 274ಕ್ಕೆ ಏರಿಕೆಯಾಗಿದೆ.vtu

Key words: Plane crash, Pilot,  last message, ATC,  revealed