ತಲಕಾವೇರಿಯಲ್ಲಿ ತೀರ್ಥೋದ್ಭವ: ಕಣ್ತುಂಬಿಕೊಂಡ ಸಹಸ್ರಾರು ಭಕ್ತರು

ಮಡಿಕೇರಿ, ಅಕ್ಟೋಬರ್ 17, 2020 (www.justkannada.in):  ಕೊಡಗಿನ ತಲಕಾವೇರಿಯಲ್ಲಿ ಇಂದು ಕಾವೇರಿ ಆವಿರ್ಭವಿಸಿದ್ದಾಳೆ.

ಮಕರ ಲಘ್ನದಲ್ಲಿ 1 ಗಂಟೆ‌ 11 ನಿಮಿಷಕ್ಕೆ ಜೀವನದಿ ಉಕ್ಕಿ ಹರಿದಿದೆ. ಕಾವೇರಿ ತೀರ್ಥೋದ್ಭವವನ್ನ ಸಹಸ್ರಾರು ಜನತೆ ಕಣ್ತುಂಬಿಕೊಂಡಿದ್ದಾರೆ, ಬ್ರಹ್ಮ ಕುಂಡಿಕೆ ಬಳಿ‌ ಮಂತ್ರಘೋಷ ಮುಗಿಲು‌ ಮುಟ್ಟಿದೆ.

ಕಾವೇರಿಗೆ ಸಹಸ್ರಾರು ಭಕ್ತರಿಂದ ಜಯಘೋಷ ಕೂಗಿ ಸಂಭ್ರಮಿಸಿದರು. ತೀರ್ಥೋದ್ಭವವಾಗುತ್ತಿದ್ದಂತೆ ತೀರ್ಥ ಪ್ರೋಕ್ಷಣೆ ಮಾಡಿಕೊಂಡ ಅರ್ಚಕ ವೃಂದ, ಬಳಿಕ ಬ್ರಹ್ಮ‌ಕುಂಡಿಕೆ ಬಳಿ‌ ನೆರೆದಿದ್ದ ಭಕ್ತರಿಗೂ ತೀರ್ಥ ಪ್ರೋಕ್ಷಣೆ ಮಾಡಿದರು.