ಪಿಎಫ್ ಐ ಬಾಲ ಬಿಚ್ಚಿದ್ರೆ ತಲೆನೂ ಕಟ್, ಬಾಲನೂ ಕಟ್- ಸಿ.ಟಿ ರವಿ ಎಚ್ಚರಿಕೆ…

ಚಿಕ್ಕಮಗಳೂರು,ಡಿಸೆಂಬರ್,26,2020(www.justkannada.in):  ಪಿಎಫ್‌ಐ ನವರು ಬಾಲ ಬಿಚ್ಚಿ ಮೆರೆಯುವ ಕಾಲ ಈಗಿಲ್ಲ. ಬಾಲ ಬಿಚ್ಚಿದರೆ ಬಾಲನೂ ಕಟ್, ತಲೆನೂ ಕಟ್  ಮಾಡಲಾಗುತ್ತದೆ ಎಂದು  ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಎಚ್ಚರಿಕೆ ನೀಡಿದ್ದಾರೆ.Teachers,solve,problems,Government,bound,Minister,R.Ashok

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್  ಕಚೇರಿ ಮೇಲೆ ಪಿಎಫ್ ‌ಐ ಕಾರ್ಯಕರ್ತರಿಂದ ಮುತ್ತಿಗೆ ವಿಚಾರ ಕುರಿತು ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಿ.ಟಿ ರವಿ,   ಸಿಎಎ ವಿರುದ್ಧದ ಪ್ರತಿಭಟನೆಗೆ ನೂರಾರು ಕೋಟಿ ರೂ ಅಕ್ರಮ ಹಣ ದೇಶವಿದೇಶದಿಂದ ಬಂದ ಮಾಹಿತಿ ಇದೆ. ಅದರ ಬಗ್ಗೆ ಇಡಿ ತನಿಖೆ ಮಾಡಿದರೆ, ಇವರು ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿಕೊಳ್ಳುವುದು ಏಕೆ ಎಂದು ಪ್ರಶ್ನಿಸಿದರು.pfi-tail-head-cut-bjp-national-general-secretary-ct-ravi

ಆದರೆ ಇಡಿ ತನಿಖೆ ಬೇಡ ಎನ್ನಲೂ ಪಿಎಫ್‌ ಐ ಯಾರು…? ಭಾರತ ಇರುವುದು ಬಯೋತ್ಪಾದನೆ  ಮಾಡಲು ಅಲ್ಲ. ಭಯೋತ್ಪಾದನೆಗೆ ವಿದೇಶದಿಂದ ಹಣ ಬರುವುದನ್ನು ತಡೆಯಲು ತನಿಖೆ ನೆಡೆಯಬೇಕಿದೆ. ತನಿಖೆಯ ಬಳಿಕ ಇವರ ಉದ್ದೇಶ- ದುರುದ್ದೇಶವನ್ನು ಜಗತ್ತಿಗೆ ಹೇಳುತ್ತೇವೆ ಎಂದು ಸಿ.ಟಿ ರವಿ ತಿಳಿಸಿದರು.

Key words: PFI- tail – head- cut – BJP national general secretary- CT Ravi