ಬಣ್ಣ ಹೊಡೆಯುವಾಗ ಹೈ ಟೆನ್ಷನ್ ತಂತಿ ತಗುಲಿ ವ್ಯಕ್ತಿಗೆ ಗಂಭೀರ ಗಾಯ.

ಮೈಸೂರು,ಜನವರಿ,18,2024(www.justkannada.in):  ಬಣ್ಣ ಹೊಡೆಯುವಾಗ ಹೈ ಟೆನ್ಷನ್ ತಂತಿ ತಗುಲಿ ವ್ಯಕ್ತಿ ಗಂಭೀರ ಗಾಯಗೊಂಡಿರುವ ಘಟನೆ ಮೈಸೂರಿನ ರಾಘವೇಂದ್ರ ನಗರದಲ್ಲಿ ನಡೆದಿದೆ.

ಸಿದ್ದರಾಜು (37) ಗಾಯಗೊಂಡ ಕಾರ್ಮಿಕ. ಜೊತೆಯಲ್ಲಿದ್ದ ಬಾಲಕ ಮನು ಎಂಬಾತನಿಗೂ ಗಾಯಗಳಾಗಿದೆ. ವಿದ್ಯುತ್ ಸ್ಪರ್ಶದಿಂದ ಸಿದ್ದರಾಜು ಸುಟ್ಟು ಕರಕಲಾದ ಸ್ಥಿತಿಯಲ್ಲಿದ್ದು, ಗಂಭೀರ ಗಾಯಗೊಂಡ ಸಿದ್ದರಾಜು ಹಾಗೂ ಮನು ಕೆಆರ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಈ ಕುರಿತು ನಜರ್ ಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Key words: Person- seriously -injured – high tension- wire – painting.