ಲಿಕ್ಕರ್ ಉದ್ಯಮದಲ್ಲಿ ಶೇ.50ಕ್ಕಿಂತ ಹೆಚ್ಚು ಮಹಿಳೆಯರಿಗೆ ಉದ್ಯೋಗ ನೀಡಿದ “ಪೆರ್ನಾಡ್ ರೆಕಾರ್ಡ್ ಇಂಡಿಯಾ”

ಬೆಂಗಳೂರು,ಫೆಬ್ರವರಿ,17,2022(www.justkannada.in):  ವೈನ್ ಹಾಗೂ ಸ್ಪಿರಿಟ್ ಉದ್ಯಮದಲ್ಲಿ ಮುಂಚೂಣಿಯಲ್ಲಿರುವ “ಪೆರ್ನಾಡ್ ರೆಕಾರ್ಡ್ ಇಂಡಿಯಾ” ತನ್ನ ಸಂಸ್ಥೆಯಲ್ಲಿ ಶೇ.50ಕ್ಕಿಂತ ಹೆಚ್ಚು ಮಹಿಳೆಯರಿಗೆ ಉದ್ಯೋಗ ನೀಡುವ ಮೂಲಕ ಉದ್ಯೋಗ ಸಮಾನತೆ ಸೃಷ್ಟಿಸಿದೆ. ಅಷ್ಟೆ ಅಲ್ಲದೆ, ಮಂಗಳಮುಖಿಯರಿಗೂ ಉದ್ಯೋಗ ನೀಡುವತ್ತ ಹೆಜ್ಜೆ ಇಟ್ಟಿದೆ.

ಮಹಿಳೆಯರಿಗೂ ಲಿಕ್ಕರ್ ಉದ್ಯಮದಲ್ಲಿ ಸಮಾನತೆ ನೀಡುವ ಉದ್ದೇಶದಿಂದ ನಿರ್ಣಾಯಕ ಸ್ಥಾನಗಳಲ್ಲಿ ಮಹಿಳೆಯನ್ನೇ ನೇಮಕ ಮಾಡಿಕೊಳ್ಳುವ ಮೂಲಕ ಮಹಿಳೆಯರಿಗೆ ಲಿಕ್ಕರ್ ಉದ್ಯಮದಲ್ಲಿ ಅವಕಾಶ ಕಲ್ಪಿಸಿಕೊಡಲಾಗಿದೆ. ಪೆರ್ನಾಡ್ ರೆಕಾರ್ಡ್‌ ನ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ, ಜನರಲ್ ಕೌನ್ಸೆಲ್, ಕಾರ್ಪೋರೇಟ್ ಸಂವಹನ, ಪೂರ್ವ ವಲಯದ ಮುಖ್ಯಸ್ಥರು, ಮುಖ್ಯ ನಾವೀನ್ಯತೆ ಅಧಿಕಾರಿ ಸೇರಿದಂತೆ 8 ಪ್ರಮುಖ ಸ್ಥಾನಗಳಿಗೆ ಮಹಿಳೆಯರನ್ನೇ ನೇಮಕ ಮಾಡಿರುವುದು ವಿಶೇಷ. ಮತ್ತೊಂದು ವಿಶೇಷತೆ ಎಂದರೆ ತೃತೀಯ ಲಿಂಗಿಗಳಿಗೂ ಉದ್ಯೋಗ ಅವಕಾಶ ತೆರೆದಿದೆ. ಈಗಾಗಲೇ ಕೆಲವು ಶಾಖೆಗಳಲ್ಲಿ ಮಂಗಳಮುಖಿಯರನ್ನೂ ನೇಮಕ ಮಾಡಿಕೊಳ್ಳಲಾಗಿದ್ದು,  ಉದ್ಯೋಗ ಹರಸಿ ಬರುವ ತೃತೀಯ ಲಿಂಗಿಗಳಿಗೂ ಉದ್ಯೋಗ ನೀಡಲಾಗುವುದು ಎಂದು ಪೆರ್ನಾಡ್ ರೆಕಾರ್ಡ್‌ ನ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ನೀತು ಭೂಷಣ್ ಹೇಳುತ್ತಾರೆ.

ಪೆರ್ನಾಡ್‌ ನಲ್ಲಿ ಮಹಿಳೆಯರಿಗೂ ಸಮಾನ ಉದ್ಯೋಗ ಅವಕಾಶ ಕಲ್ಪಿಸಿಕೊಡುವುದು ನಮ್ಮ ಉದ್ದೇಶ. ಈ ಉದ್ಯಮದಲ್ಲಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ಇರಲಿಲ್ಲ. ಅಷ್ಟೆ ಅಲ್ಲದೆ, ಅವರಿಗೆ ಸುರಕ್ಷತೆಯ ಭಯ ಇತ್ತು. ಆದರೆ, ಪರ್ನಾಡ್ ರೆಕಾರ್ಡ್ ಮಹಿಳಾ ಉದ್ಯಮಿಗಳಿಗೆ ಸುರಕ್ಷತೆಯ ಜೊತೆಗೆ ಸಮಾನ ಉದ್ಯೋಗ ನೀಡಲಾಗುತ್ತಿದೆ ಎಂದು ಹೇಳಿದರು.

Key words: Pernod Record India- – employs – women