ಜನರ ಸೇವೆ ಬಿಜೆಪಿಯವರ ಆದ್ಯತೆ ಅಲ್ಲ: ಬೆಂಗಳೂರು, ವಿಧಾನಸೌಧ, ಗೃಹಕಚೇರಿ ಬಿಟ್ಟು ಎಲ್ಲೂ ಬರಲಿಲ್ಲ – ಡಿ.ಕೆ ಶಿವಕುಮಾರ್..

ಬೆಳಗಾವಿ,ಡಿಸೆಂಬರ್,5,2020(www.justkannada.in):  ಬೆಳಗಾವಿ ಭಾಗದಲ್ಲಿ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ್ದವರಿಗೆ ಪರಿಹಾರ ನೀಡಲು ಬಿಜೆಪಿಗೆ ಆಗಲಿಲ್ಲ. ಜನರ ಸೇವೆ ಬಿಜೆಪಿಯವರ ಆದ್ಯತೆ ಅಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕಿಡಿಕಾರಿದ್ದಾರೆ.

ಬೆಳಗಾವಿಯಲ್ಲಿ ಇಂದು ಮಾತನಾಡಿದ ಡಿ.ಕೆ ಶಿವಕುಮಾರ್,  ಈ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಬೆಂಗಳೂರು, ವಿಧಾನಸೌಧ, ಗೃಹಕಚೇರಿ ಕೃಷ್ಣ ಬಿಟ್ಟು ಎಲ್ಲೂ ಬರಲಿಲ್ಲ. ಇವರಿಗೆ ಉತ್ತರ ಕರ್ನಾಟಕ ಭಾಗದ ಜನರ ಬಗ್ಗೆ ಕಾಳಜಿ ಇಲ್ಲ. ಒಟ್ಟಾರೇ ಜನರ ಸೇವೆ ಬಿಜೆಪಿಯವರ ಆದ್ಯತೆ ಅಲ್ಲ ಎಂದು ಟೀಕಿಸಿದರು.people-service-not-bjps-priority-dk-shivakumar

ಸುವರ್ಣಸೌಧದಲ್ಲಿ ಅಧಿವೇಶನ ನಡೆಸದಿರುವ ಕುರಿತು ಪ್ರತಿಕ್ರಿಯಿಸಿದ ಡಿ.ಕೆ ಶಿವಕುಮಾರ್, ‘ಉತ್ತರ ಕರ್ನಾಟಕದ ಜನರ ಸಮಸ್ಯೆಗಳ ನಿವಾರಣೆಗೆ ಸ್ಪಂದಿಸಲು ಸುವರ್ಣ ವಿಧಾನನಸೌಧ ನಿರ್ಮಿಸಲಾಯಿತು. ಆದರೆ, ಅದನ್ನು ಆ ಉದ್ದೇಶಕ್ಕೆ ಬಳಸಲಾಗುತ್ತಿಲ್ಲ. ಈ ವಿಷಯದಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ’ ಕೊರೋನಾ ನೆಪದಿಂದ ಬೆಳಗಾವಿ ಸುವರ್ಣಸೌಧದಲ್ಲಿ ಅಧಿವೇಶನ ನಡೆಸುತ್ತಿಲ್ಲ. ಅಧಿವೇಶನ ನಡೆಸದಿದ್ರೆ ಮತ್ಯಾಕೆ..? ಅನ್ಯಾಯ ಆಗುತ್ತೆ ಅಂತಾ ಹೇಳಿತ್ತಿದ್ದ ಶಾಸಕರು ಈಗ ಮಾತನಾಡುತ್ತಲೇ ಇಲ್ಲ ಎಂದು ಸಚಿವ ರಮೇಶ್ ಜಾರಕಿಹೊಳಿಗೆ ಟಾಂಗ್ ನೀಡಿದರು.

Key words: People- service – not BJP’s- priority- DK Shivakumar