ಮೈಸೂರು-ಬೆಂಗಳೂರು ದಶಪಥ ಹೆದ್ಧಾರಿ ಕ್ರೆಡಿಟ್ ಯಾರಿಗೆಂದು ಜನ ತೀರ್ಮಾನಿಸಲಿ- ಸಿಎಂ ಬಸವರಾಜ ಬೊಮ್ಮಾಯಿ.

ಬೆಂಗಳೂರು,ಮಾರ್ಚ್,11,2023(www.justkannada.in): ಮೈಸೂರು-ಬೆಂಗಳೂರು ದಶಪಥ ಹೆದ್ಧಾರಿ ನಾಳೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಳ್ಳುತ್ತಿದೆ. ಈ ಮಧ್ಯೆ ಮೂರು ಪಕ್ಷಗಳ ನಡುವೆ  ಹೆದ‍್ಧಾರಿ ನಿರ್ಮಾಣ ಕ್ರೆಡಿಟ್ ವಾರ್ ನಡೆಯುತ್ತಿದ್ದು ಈ ವಿಚಾರವನ್ನ ಸಿಎಂ ಬಸವರಾಜ ಬೊಮ್ಮಾಯಿ ಜನರ ತೀರ್ಮಾನಕ್ಕೆ ಬಿಟ್ಟಿದ್ದಾರೆ.

ಈ ಕುರಿತು ಮಾತನಾಡಿರುವ ಸಿಎಂ ಬಸವರಾಜ ಬೊಮ್ಮಾಯಿ, ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದಶಪಥ ಹೆದ್ಧಾರಿ ಯೋಜನೆಯಾಗಿದೆ. ಎನ್ ಡಿಎ ಸರ್ಕಾರದ ಅವಧಿಯಲ್ಲಿ ಯೋಜನೆ ಮುಗಿದಿದೆ.  ನೈಸ್ ರೋಡ್ ಮಾಡುತ್ತೀವಿ ಅಂತಾ ನಿಲ್ಲಿಸಿದ್ರು. ನೈಸ್ ರೋಡ್ ಸಹ ಮಾಡಲಿಲ್ಲ. ಹೀಗಾಗಿ ವಾಹನ ದಟ್ಟಣೆ  ಹೆಚ್ಚಾಯಿತು. ಈಗ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಮೈಸೂರು-ಬೆಂಗಳೂರು ಹೆದ‍್ಧಾರಿ  ಮಾಡಿದೆ. ಹೀಗಾಗಿ ಯಾರಗೆ ಕ್ರೆಡಿಟ್  ಸಲ್ಲಬೇಕೆಂದು ಜನರೇ ತೀರ್ಮಾನಿಸಲಿ ಎಂದು ತಿಳಿಸಿದರು.

ಕಳೆದ ಕೆಲವು ದಿನಗಳಿಂದ ಬೆಂಗಳೂರು-ಮೈಸೂರು ಎಕ್ಸ್‌ ಪ್ರೆಸ್‌ ವೇ ಕ್ರೆಡಿಟ್ ಗಾಗಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ನಡುವೆ ವಾಕ್ಸಮರ ನಡೆಯುತ್ತಿದ್ದು, ನಮ್ಮ ಯೋಜನೆ ಎಂದು ಹೇಳುತ್ತಿವೆ.

Key words: people- decide who – credit -Mysore-Bangalore -highway – CM Basavaraja Bommai.