ಜನರು ಕೋವಿಡ್ ನಿಯಮ ಪಾಲಿಸಿದ್ದರೆ ಲಾಕ್ ಡೌನ್, ಸೀಲ್ ಡೌನ್ ಬೇಕಿರಲಿಲ್ಲ- ಸಚಿವ ಸುಧಾಕರ್…

ಬೆಂಗಳೂರು,ಏಪ್ರಿಲ್,20,2021(www.justkannada.in):  ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಮಾಣ ಹೆಚ್ಚುತ್ತಿದ್ದು ಈ ಮಧ್ಯೆ ಜನರು ಸರಿಯಾಗಿ ಕೋವಿಡ್ ನಿಯಮ ಪಾಲಿಸಿದ್ದರೇ ಲಾಕ್ ಡೌನ್, ಸೀಲ್ ಡೌನ್ ಬೇಕಿರಲಿಲ್ಲ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.jk

ಮಾಧ್ಯಮಗಳ ಜತೆ ಇಂದು ಮಾತನಾಡಿದ ಸಚಿವ ಸುಧಾಕರ್,  ಎಲ್ಲರಿಗೂ ಬೆಡ್ ಒದಗಿಸಲು ಆಗುತ್ತಿಲ್ಲ. ವಾಸ್ತವವಾಗಿ ಏನಿದೆಯೋ ಅದನ್ನ ಒಪ್ಪಿಕೊಳ್ಳಬೇಕು. ಜನರು ಸರಿಯಾಗಿ ಕೋವಿಡ್ ನಿಯಮ ಪಾಲಿಸಿದ್ದರೆ ಲಾಕ್ ಡೌನ್, ಸೀಲ್ ಡೌನ್ ಬೇಕಿರಲಿಲ್ಲ. ಹಲವು ಬಾರಿ ಎಚ್ಚರಿಕೆ ನೀಡಿದ್ದರೂ ಜನರು ಎಚ್ಚೆತ್ತುಕೊಳ್ಳಲಿಲ್ಲ. ಹೀಗಾಗಿ ಕಠಿಣ ನಿಯಮ ಜಾರಿಗೊಳಿಸಬೇಕಿದೆ ಎಂದರು.People - Covid rule-no need -seal down- lock down -  Minister- Sudhakar.

ನಾವು ಸಂದಿಗ್ಧ ಪರಿಸ್ಥಿತಿಯಲ್ಲಿದ್ದೇವೆ. ಇದು ಯುದ್ಧದ ಸಮಯ. ಕೋವಿಡ್ ನಿಯಂತ್ರಣ ವಿಚಾರದಲ್ಲಿ ಪ್ರತಿಷ್ಟೆ ತೋರಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಮರೋಪಾದಿಯಲ್ಲಿ ಕೆಲಸ ಮಾಡುತ್ತೇವೆ. ಜನರ ಜೀವ ಉಳಿಸುವ ಕಡೆ ಹೆಚ್ಚಿನ ಗಮನ ಕೊಡುತ್ತೇವೆ ಎಂದು ಸಚಿವ ಸುಧಾಕರ್ ತಿಳಿಸಿದರು.

ENGLISH SUMMARY….

Lockdown, seal down were not necessary if people had followed COVID guidelines strictly: Minister Sudhakar
Bengaluru, Apr. 20, 2021 (www.justkannada.in): “Corona cases are increasing day-by-day in the state, if people had followed the guidelines properly imposing lockdown, seal down was not necessary,” said Health Minister Dr. K. Sudhakar.
Speaking to the press persons today about this Minister K. Sudhakar said providing hospital beds to all the COVID patients has become difficult. “We have to agree on the reality. If people would have followed the COVID guidelines strictly, thought of imposing seal down, or lockdown wouldn’t have come at all. Unfortunately, the people neglected all our warnings and requests. Hence, now it has become inevitable to think about imposing tough rules,” he added.
“We are presently in a dilemma. This is wartime for us. This is not a situation to exhibit our prestige. We intend to take everyone into confidence and work on a war foot basis to prevent the pandemic. We are committed to giving importance to save people’s lives,” he added.
Keywords: COVID-19 Pandemic/ people neglected/ State Government/ Health Minister Dr. K. Sudhakar/ lock down/ seal down was not necessary

Key words: People – Covid rule-no need -seal down- lock down –  Minister- Sudhakar.