ಮಹಾರಾಣಿ ಕೆಂಪನಂಜಮ್ಮಣ್ಣಿ  ಅವರ ಮಾಡಿರುವ  ಸಮಾಜದ ಬದಲಾವಣೆ ಬಗ್ಗೆ ಜನರಿಗೆ ತಿಳಿಸಬೇಕು- ಹಿರಿಯ ಸಾಹಿತಿ, ಆರ್ಯಾಂಬ ಪಟ್ಟಾಭಿ..

 

ಮೈಸೂರು,ಮಾರ್ಚ್,19,2021(www.justkannada.in): ಕರ್ನಾಟಕ ಸೇನಾ ಪಡೆ ವತಿಯಿಂದ, ರೋಟರಿ ಸಭಾಂಗಣದಲ್ಲಿ  ಆಯೋಜಿಸಿದ್ದ  ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನಮ್ಮ ನಾಡಿನ ಹೆಮ್ಮೆಯ ಮಹಾರಾಣಿ ಕೆಂಪನಂಜಮ್ಮಣ್ಣಿ – ವಾಣಿವಿಲಾಸ ಸನ್ನಿಧಾನ ಅಮ್ಮ ರವರ ದಿನಾಚರಣೆ  ಕಾರ್ಯಕ್ರಮವನ್ನು ಹಿರಿಯ ಸಾಹಿತಿ, ಆರ್ಯಾಂಬ ಪಟ್ಟಾಭಿ ರವರು ಉದ್ಘಾಟಿಸಿ ಮಾತನಾಡಿದರು.

ಮಹಿಳೆಗೆ ಮೊದಲು ವಿಧ್ಯಾಭ್ಯಾಸ ಬೇಕು, ಆತ್ಮ ವಿಶ್ವಾಸ ಬೇಕು, ಸಮಾನತೆ ಬೇಕು ಹಾಗು ಸಮಾನ ಮನಸ್ಥಿತಿ ಇರಬೇಕು. ಜಾತಿಯತೆ ಯನ್ನು ತೆಗೆದು ಎಸೆಯಬೇಕು. ಮಹಾರಾಣಿ ಕೆಂಪನಂಜಮ್ಮಣ್ಣಿ ಯಾರು ಏನು ಎಂದು ಬಹಳಷ್ಟು ಜನರಿಗೆ ತಿಳಿದಿಲ್ಲ.  ನಾವು ಹಿಂದಿನವರನ್ನೆಲ್ಲಾ ಮರೆತಿದ್ದೇವೆ.  ಮಹಾರಾಣಿ ಕೆಂಪನಂಜಮ್ಮಣ್ಣಿ ರವರು ಏನೇನು ಸಮಾಜದ ಬದಲಾವಣೆ ಮಾಡಿದ್ದಾರೆ ಎಂದು ಜನರಿಗೆ ತಿಳಿಸಬೇಕು. ಪ್ರಪ್ರಥಮವಾಗಿ ಮಹಿಳೆಯರಿಗೆ ಶಿಕ್ಷಣ ಬೇಕು ಎಂದು ಮಹಾರಾಣಿ ಶಾಲೆ ಕಾಲೇಜುಗಳನ್ನು ನಿರ್ಮಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಮಹಿಳೆ ಎಂದರೆ ಕೆಂಪನಂಜಮ್ಮಣ್ಣಿ ಏಕೆಂದರೆ ನಾಲ್ವಡಿ ಕೃಷ್ಣರಾಜ ಒಡೆಯರ್ ರವರಿಗೆ ಅವರು ನೀಡಿದ ಶಿಕ್ಷಣ,  ಮಾರ್ಗದರ್ಶನ ಮುಂದೆ ನಾಲ್ವಡಿ ಯವರು ಪ್ರಜಾರಾಜರಾಗಿ ಜನರಿಗೆ ಹಲವಾರು ಕೊಡುಗೆ ನೀಡಿದ್ದಾರೆ. ಇಂತಹ ಮಹಾರಾಣಿ ಕೆಂಪನಂಜಮ್ಮಣ್ಣಿ ವಾಣಿವಿಲಾಸ ರವರ ಕಾರ್ಯಕ್ರಮ ಕರ್ನಾಟಕ ಸೇನಾ ಪಡೆ ಆಯೋಜಿಸಿರುವುದು ಶ್ಲಾಘನೀಯ ಎಂದು  ಹೇಳಿದರು.

ವಿವಿಧ ಕ್ಷೇತ್ರಗಳ ಮಹಿಳಾ ಸಾಧಕರಿಗೆ ಮೈಸೂರು ಮಹಾನಗರ ಪಾಲಿಕೆ ಪೂಜ್ಯ ಮಹಾಪೌರರಾದ ಶ್ರೀಮತಿ ರುಕ್ಮಿಣಿ ಮಾದೇಗೌಡ ರವರು ” ಮಹಾರಾಣಿ ಕೆಂಪನಂಜಮ್ಮಣ್ಣಿ ವಾಣಿವಿಲಾಸ ಸನ್ನಿಧಾನ ” ಮಹಿಳಾ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಿದರು. ( ಎಡದಿಂದ ಬಲಕ್ಕೆ) ನಿರೂಪಣೆ ಕ್ಷೇತ್ರದ – ಪಲ್ಲವಿ ಕೆ ಬ ,  ಸಂಘಟನೆ ಕ್ಷೇತ್ರದ – ಸುಮಿತ್ರಾ ರಮೇಶ್, ಸೇವಾ ಕ್ಷೇತ್ರದ – ಮಂಗಳಮುದ್ದುಮಾದಪ್ಪ, ಸಂಸ್ಕೃತಿ ಕ್ಷೇತ್ರದ – ವೈದೇಹಿ ಅಯ್ಯಂಗಾರ್, ಶೈಕ್ಷಣಿಕ ಕ್ಷೇತ್ರದ- ಆಶಾಕುಮಾರಿ ವಿ.ಮಹಾರಾಣಿ ಕೆಂಪನಂಜಮ್ಮಣ್ಣಿ ವಾಣಿವಿಲಾಸ ರವರನ್ನು ಕುರಿತು  ಸಾಹಿತಿ ಡಾ. ಲೀಲಾ ಕೆ ಪ್ರಕಾಶ್ ಹಾಗು ನಿವೃತ್ತ ಪ್ರಾಧ್ಯಾಪಕಿ ಡಾ. ಸುಶೀಲ ಅರಸ್ ರವರು ಮಾತನಾಡಿದರು.

ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ಜೆಡಿಯು ರಾಜ್ಯಾಧ್ಯಕ್ಷೆ ಡಾ. ಮಂಜುಳ ಉಮೇಶ್ ವಹಿಸಿದ್ದರು. ಕರ್ನಾಟಕ ಸೇನಾ ಪಡೆ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ  ಪ್ರಾಸ್ತಾವಿಕ ಭಾಷಣ ಮಾಡಿದರು. ಮುಖ್ಯ ಅತಿಥಿಗಳಾಗಿ ಎಸ್, ಜೆ, ಕೆ ಅಧ್ಯಕ್ಷರು ಎಂ ಎನ್  ದೊರೆಸ್ವಾಮಿ , ಕೆ ಎಸ್ ಆರ್ ಟಿ ಸಿ ಅಧಿಕಾರಿ ದೇವರಾಜ್ ಗೌಡ,  ಡಾ. ಶಾಂತರಾಜೇಅರಸ್ ಪಿ, ಪ್ರಭುಶಂಕರ್ ಎಂ ಬಿ, ಅಂಬಾ ಅರಸ್, ಪುಷ್ಪಾ ಅಯ್ಯಂಗಾರ್,  ಬಂಗಾರಪ್ಪ, ಬಸವರಾಜು, ಡಾ. ಮೊಗಣ್ಣಾಚಾರ್ ಇನ್ನೂ ಇತರರು ಉಪಸ್ಥಿತರಿದ್ದರು.

Key words:People about -change of society -kempananjammani-Senior Literature- Aryamba Pattabhi.