ಧರ್ಮದ ಬಗ್ಗೆ ಯಾವುದೇ ದೋಷಾರೋಪ ಮಾಡಿಲ್ಲ: ಆಕ್ರೋಶ ಸರಿ ಅಲ್ಲ- ಎಂ.ಬಿ ಪಾಟೀಲ್ ಹೇಳಿಕೆ ಕುರಿತು ಪೇಜಾವರ ಶ್ರೀಗಳ ಪ್ರತಿಕ್ರಿಯೆ….

ಉಡುಪಿ,ಆ,2,2019(www.justkannada.in):  ತಮ್ಮ ಮಠಗಳಲ್ಲಿರುವ ಹುಳುಕುಗಳನ್ನು ಸರಿ ಪಡಿಸಿಕೊಳ್ಳಲಿ. ಬೇರೆ ಧರ್ಮಗಳಲ್ಲಿ ಕಡ್ಡಿ ಆಡಿಸುವುದನ್ನು ನಿಲ್ಲಿಸಲಿ ಎಂದು ತಮ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದ ಮಾಜಿ ಸಚಿವ ಎಂ.ಬಿ ಪಾಟೀಲ್ ಗೆ ಪೇಜಾವರ ಶ್ರೀಗಳು ತಿರುಗೇಟು ನೀಡಿದ್ರದಾರೆ.

ನಾನು ಧರ್ಮದ ಬಗ್ಗೆ ಯಾವುದೇ ದೋಷಾರೋಪ ಮಾಡಿಲ್ಲ. ನಾನು ಲಿಂಗಾಯತ ಮತವನ್ನ ಸರಿ ಪಡಿಸಲು ಹೋಗುತ್ತಿಲ್ಲ ಆದರೆ ನನ್ನ ವಿರುದ್ದ ಯಾಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ..? ಆಕ್ರೋಶ ಸರಿ ಅಲ್ಲ ಎಂದು ಎಂಬಿ ಪಾಟೀಲ್ ಹೇಳಿಕೆ ಕುರಿತು ಪೇಜಾವರ ಶ್ರೀಗಳು ಪ್ರತಿಕ್ರಿಯಿಸಿದ್ದಾರೆ.

ಈ ಬಗ್ಗೆ ಮಾಧ್ಯಮಗಳ ಜತೆ ಮಾತನಾಡಿದ ಪೇಜಾವರ ಶ್ರೀಗಳು, ನಾನು ಲಿಂಗಾಯತ ಮತವನ್ನ ಸರಿ ಪಡಿಸಲು ಹೋಗುತ್ತಿಲ್ಲ.. ನಾನು ಸ್ನೇಹದಿಂದ ಸಹೋದರತ್ವದಿಂದ ನಮ್ಮಲ್ಲೇ ಇರಿ ಎಂದು ಹೇಳುತ್ತಿದ್ದೇನೆ. ನಾನು ಅವರಲ್ಲಿ ಉಳುಕು ಹೇಳಿದ್ದೇನಾ. ದೋಷಾರೋಪ ಮಾಡಿದ್ದೇನಾ…? ನಾನು ಹೇಳಿರುವುದು ನೀವು ಹಿಂದುಗಳೇ. ನಮ್ಮನ್ನು ಬಿಟ್ಟು ಹೇಗಬೇಡಿ ಎಂದಿದ್ದೇನೆ ಅಷ್ಟೇ ಎಂದು ಸ್ಪಷ್ಟಪಡಿಸಿದರು. ನಾನು ಸೌಜನ್ಯದಿಂದ ಕೇಳಿದರೇ ಅವರು ಅಷ್ಟೋಂದು ಆಕ್ರೋಶ ಭರಿತವಾಗಿ ಹೇಳಲು ಕಾರಣವೇನು. ಬಸವಣ್ಣನವರ ಬಗ್ಗೆ ಬಹಳ ಗೌರವ ಉಂಟು. ಅವರ ಬಗ್ಗೆ ಯಾವುದೇ ಆರೋಪ ಮಾಡಿಲ್ಲ. ಧರ್ಮದ ಬಗ್ಗೆ ಯಾವುದೇ ದೋಷಾರೋಪ ಮಾಡಿಲ್ಲ ಎಂದರು.

ಹಿಂದೂ ಧರ್ಮ ಎಂದರೇ ಹಿಂದೂ ದೇಶದ ಧರ್ಮ. ಬಸವಣ್ಣ, ಶಂಕರಾಚಾರ್ಯರು, ಮಧ್ವಾಚಾರ್ಯರು, ರಾಮಾನುಜರು, ಮಹಾವೀರ, ಬುದ್ದ ಎಲ್ಲರೂ ಕೂಡ ಈ ದೇಶದಲ್ಲಿ ಅವತಾರ ಮಾಡಿ ಧರ್ಮ ಪ್ರಾಚಾರ ಮಾಡಿದ್ದಾರೆ. ಈ ದೇಶದ ಸಂತರು ಪ್ರವರ್ತಕರು ಮಾಡಿದ ಧರ್ಮ ಹಿಂದೂ ಧರ್ಮ. ಇದರಲ್ಲಿ ವಿವಾದವೇ ಇಲ್ಲ.ಹಿಂದೂ ಧರ್ಮದ ಅನುಯಾಯಿಗಳೆಲ್ಲರೂ ಹಿಂದೂಗಳೆ.ನಿಮ್ಮ ಸಿದ್ದಾಂತಗಳ ಬಗ್ಗೆ ನಾವು ಖಂಡನೆ ಮಾಡಲಿಕ್ಕೆ ಹೋಗಿಲ್ಲ ಎಂದು ಪೇಜಾವರ ಶ್ರೀಗಳು ಹೇಳಿದರು.

Keywords: pejavara Shree-reaction – MB Patil’s- statement