ಪವಿತ್ರಗೌಡ ಆರೋಗ್ಯದಲ್ಲಿ ಏರು ಪೇರು,  ಆಸ್ಪತ್ರೆಗೆ ದಾಖಲು.

Pavithra Gowda, A1 accused sent to hospital over illness.

 

ಬೆಂಗಳೂರು, ಜೂ.18,2024: (wwww.justkannada.in news )ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆಯ ತನಿಖೆಯಲ್ಲಿ ಎ1 ಆಗಿರುವ ಪವಿತ್ರಗೌಡಗೆ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲು.

ಮಲ್ಲತ್ತಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಾಗಿರುವ ಪವಿತ್ರ ಗೌಡ. ಆಕೆಯ ಬಂಧನದ ಹೊಣೆ ಹೊತ್ತಿರುವ ಕಾಮಾಕ್ಷಿಪಾಳ್ಯ ಪೊಲೀಸರು ಇಂದು ಮುಂಜಾನೆ ಅನ್ನಪೂರ್ಣೇಶ್ವರಿ ನಗರ ಠಾಣೆಗೆ ವೈದ್ಯರನ್ನು ಕರೆಸಿದಾಗ ಈ ವಿಷಯ ಬೆಳಕಿಗೆ ಬಂದಿದೆ.

ಚಿತ್ರದುರ್ಗ ನಿವಾಸಿ ರೇಣುಕಾಸ್ವಾಮಿ ಅವರ ಕೊಲೆಗೂ ಪವಿತ್ರಗೌಡಗೂ ಸಂಬಂಧವಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಆಕೆಯನ್ನೇ ಪ್ರಕರಣದ ಮೊದಲ ಆರೋಪಿಯನ್ನಾಗಿ ಮಾಡಲಾಯಿತು. ಪವಿತ್ರಾ ಗೌಡಗೆ ಮೃತ ರೇಣುಕಾಸ್ವಾಮಿ ಸಾಮಾಜಿಕ ಮಾಧ್ಯಮದ ಮೂಲಕ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದದ್ದೇ ಈ ಅವಘಡಕ್ಕೆ ಕಾರಣ.

ಪವಿತ್ರಾ ಗೌಡ ಬಳಿ ಸುಮಾರು 15 ಕೋಟಿ ರೂ. ಮೌಲ್ಯದ ಆಸ್ತಿ ಪತ್ರ ಪತ್ತೆಯಾದ ಮೇಲೆ ಪೊಲೀಸರು ತನಿಖೆ ತೀವ್ರಗೊಳಿಸಿದ್ದು, ಸಂಭವನೀಯ ರಾಜಕೀಯ ಸಂಪರ್ಕಗಳು ಮತ್ತು ಹಣಕಾಸಿನ ಅಕ್ರಮಗಳ ಸುಳಿವು ಬೆನ್ನತ್ತಿ, ಈ ನಿಧಿಗಳ ಮೂಲವನ್ನು ಪತ್ತೆಹಚ್ಚಲು ಅಧಿಕಾರಿಗಳು ಈಗ ಗಮನಹರಿಸಿದ್ದಾರೆ.

key words: Pavithra Gowda, A1 accused, sent to hospital, over illness.

SUMMARY:

She has been admitted to Mallattahalli Primary Health Center following health complications. The incident came to know when the Kamakshipalya police, summoned a doctor to the Annapurneswari Nagar police station earlier today.