ಜುಲೈ 18ರಿಂದ ಸಂಸತ್ ಮುಂಗಾರು ಅಧಿವೇಶನ: ಅಸಂಸದೀಯ ಪದಗಳ ಪಟ್ಟಿ ಬಿಡುಗಡೆ.

ನವದೆಹಲಿ,ಜುಲೈ,14,2022(www.justkannada.in):  ಸಂಸತ್ತಿನ ಈ ಬಾರಿಯ ಮುಂಗಾರು ಅಧಿವೇಶನ ಜುಲೈ 18 ರಿಂದ ಆರಂಭವಾಗಲಿದ್ದು, ಲೋಕಸಭೆಯ ಸೆಕ್ರೆಟರಿಯೇಟ್ ಅಸಂಸದೀಯ ಪದಗಳ ಪಟ್ಟಿ ಬಿಡುಗಡೆ ಮಾಡಿದೆ. ಪಟ್ಟಿಯಲ್ಲಿರುವ ಅಸಂಸದೀಯ ಪದಗಳನ್ನ ಬಳಸಿದರೆ ಕಲಾಪದಿಂದ ಹೊರ ಹಾಕುವುದಾಗಿ ಎಚ್ಚರಿಕೆ ನೀಡಿದೆ.

ಲೋಕಸಭೆಯ ಸೆಕ್ರೆಟರಿಯೇಟ್  ಬಿಡುಗಡೆ ಮಾಡಿರುವ ಪಟ್ಟಿಗಳಲ್ಲಿ ಜುಮ್ಲಜೀವಿ, ಬಾಲ್ ಬುದ್ಧಿ, ಕೊವಿಡ್ ಸ್ಪ್ರೆಡ್ಡರ್, ಸ್ನೂಪ್ಗೇಟ್, ಅರಾಜಕತಾವಾದಿ, ಶಕುನಿ, ಸರ್ವಾಧಿಕಾರಿ, ತಾನಶಾ, ತಾನಶಾಹಿ, ಜೈಚಂದ್, ವಿನಾಶ್ ಪುರುಷ, ಖಾಲಿಸ್ತಾನಿ, ಖೂನ್ ಸೆ ಖೇತಿ, ದೋಹ್ರಾ ಚರಿತ್ರ, ನಿಕಮ್ಮ, ನೌಟಂಕಿ, ದಿಂಡೋರಾ ಪೀಟ್ನಾ, ಬೆಹ್ರಿ ಸರ್ಕಾರ್ ಸೇರಿ ಹಲವು ಪದಗಳು ಸೇರಿದ್ದು ಈ ಪದಗಳನ್ನ ಅಧಿವೇಶನದಲ್ಲಿ ಬಳಸುವಂತಿಲ್ಲ. ಪಟ್ಟಿಯಲ್ಲಿರುವ ಅಸಂಸದೀಯ ಪದಗಳನ್ನ ಬಳಸಿದರೆ ಕಲಾಪದಿಂದ ಹೊರ ಹಾಕುವ ಎಚ್ಚರಿಕೆ ನೀಡಿದೆ.

ಬಿಡುಗಡೆ ಮಾಡಲಾಗಿರುವ ಪಟ್ಟಿಯಲ್ಲಿರುವ ಪದಗಳನ್ನ ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ಬಳಸುವಂತಿಲ್ಲ. ಹೀಗೆ ಶಾಸಕಾಂಗ ಸಂಸ್ಥೆಗಳಲ್ಲಿ ಕಾಲಕಾಲಕ್ಕೆ ಕೆಲವು ಪದಗಳನ್ನ ಅಸಂಸದೀಯವೆಂದು ಘೋಷಣೆ ಮಾಡಲಾಗುತ್ತದೆ.

ಮುಂಗಾರು ಅಧಿವೇಶನ ಜುಲೈ 18 ರಿಂದ ಆರಂಭವಾಗಿ ಆಗಸ್ಟ್ 12 ರಂದು ಕೊನೆಗೊಳ್ಳಲಿದೆ ಎಂದು ಲೋಕಸಭೆಯ ಸಚಿವಾಲಯ ಈಗಾಗಲೇ ತಿಳಿಸಿದೆ.

Key words: Parliament-monsoon session -July 18- List – non-parliamentary- words

ENGLISH SUMMARY…

Monsoon parliament session from July 18: List of unparliamentary words released
New Delhi, July 14, 2022 (www.justkannada.in): The monsoon parliament session of 2022 will commence from July 18. The Lok Sabha Secretariat has released a list of unparliamentary words. Usage of these words will result in ousting of the members from the proceedings.
The list of words which are declared as unparliamentary include Jumlajeevi, Corrupt, Drama, Hypocrisy, Baalbuddhi, Taanshaa, Taanshaahi, Jaichand, Vinashpurush, Khalistani, Khoonse Kheti, Dohra Charitra, Nikamma, Nautanki, Dindora Peetna, Behri Sarkaar.
These words are not supposed to be used both in the upper and lower houses.
The monsoon session will commence from July 18 and will conclude on August 12.
Keywords: Lok Sabha/ monsoon session/ list of unparliamentary words