ಸಂಸತ್ ಭವನ ಮೇಲೆ ದಾಳಿ ಪ್ರಕರಣ: ಮನೋರಂಜನ್ ನಿವಾಸ, ಸಂಸದ ಪ್ರತಾಪ್ ಸಿಂಹ ಕಚೇರಿ ಸೇರಿ ವಿವಿಧೆಡೆ ವ್ಯಾಪಕ ತಪಾಸಣೆ.

ಮೈಸೂರು,ಡಿಸೆಂಬರ್,15,2023(www.justkannada.in): ಸಂಸತ್ ಭವನ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿರುವ ಮನೋರಂಜನ್ ನಿವಾಸ, ಸಂಸದ ಪ್ರತಾಪ್ ಸಿಂಹ ಕಚೇರಿ ಸೇರಿ ವಿವಿಧೆಡೆ ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳು  ವ್ಯಾಪಕ ತಪಾಸಣೆ ನಡೆಸಿದ್ದಾರೆ.

ಮೈಸೂರಿನ ವಿಜಯನಗರದಲ್ಲಿ ಮನೋರಂಜನ್ ಮನೆ ಭೇಟಿ ನೀಡಿದ ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳು ಮನೋರಂಜನ್ ಕುಟುಂಬಸ್ಥರಿಂದ ಈಗಾಗಲೇ ಒಂದಷ್ಟು ಮಾಹಿತಿ ಸಂಗ್ರಹಿಸಿದ್ದಾರೆ. ಈ ನಡುವೆ ಮನೋರಂಜನ್ ರೂಂ ಅನ್ನು ಪೊಲೀಸರು ಸೀಜ್ ಮಾಡಿ ಬೀಗ ಹಾಕಿದ್ದಾರೆ.

ಸದ್ಯ ಮನೋರಂಜನ್ ಬ್ಯಾಂಕ್ ಅಕೌಂಟ್ ಮಾಹಿತಿಯನ್ನು ಅಧಿಕಾರಿಗಳು ಪಡೆದುಕೊಂಡಿದ್ದಾರೆ. ಮನೋರಂಜನ್ ಬ್ಯಾಂಕ್ ಟ್ರಾನ್ಸಾಕ್ಷನ್ ಬಗ್ಗೆಯು ಮಾಹಿತಿ ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದು, ಆತ ಖರ್ಚು ಮಾಡುತ್ತಿರಲಿಲ್ಲ ಎಂದು ಮನೋರಂಜನ್ ಮನೆ  ತಂದೆ ದೇವರಾಜೇಗೌಡ ಹೇಳಿದ್ದರು.  ಕೆಲಸವು ಮಾಡುತ್ತಿರಲಿಲ್ಲ, ಬೆಂಗಳೂರು ದೆಹಲಿ ಮೈಸೂರಿಗೆ  ಓಡಾಡುತ್ತಿದ್ದ ಇದಕ್ಕೆಲ್ಲ ಹಣ ಎಲ್ಲಿಂದ ಬಂದಿದೆ ಎಂಬುದರ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು ಈ ನಡುವೆ ಮತ್ತೆ ಬರುವುದಾಗಿ‌ ಕುಟುಂಬಸ್ಥರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.

ಸಂಸದ ಪ್ರತಾಪ್ ಸಿಂಹ ಮೂಲಕ ಸ್ನೇಹಿತ ಸಾಗರ್ ಶರ್ಮಾ ಹೆಸರಿನಲ್ಲಿ ಪಾಸ್ ಪಡೆದು ಮನೋರಂಜನ್ ಸಂಸತ್ ಭವನ ಪ್ರವೇಶಿಸಿದ್ದನು. ಹಾಗಾಗಿ ಕೇಂದ್ರ ಮತ್ತು ರಾಜ್ಯ ಗುಪ್ತಚರ ಇಲಾಖೆ ಅಧಿಕಾರಿಗಳ ತಂಡ ಮೈಸೂರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

ಮೈಸೂರಿನ ಜಲದರ್ಶಿನಿ ಅತಿಥಿಗೃಹದ ಆವರಣದಲ್ಲಿರುವ ಪ್ರತಾಪ್ ಸಿಂಹ ಕಚೇರಿ ಬಳಿಯೂ ಪರಿಶೀಲನೆ ನಡೆಸಿದ್ದು ಪೊಲೀಸರು ತಂಡ  ಪ್ರತಾಪ್ ಸಿಂಹ ಕಚೇರಿಗೆ ಬಂದು ಹೋಗಿರುವವರ ಮಾಹಿತಿ ಸಂಗ್ರಹಿಸಿದೆ. ಹೀಗಾಗಿ ಸಂಸದ ಪ್ರತಾಪ್ ಸಿಂಹ ಕಚೇರಿ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

Key words: Parliament House –attack- case- Manoranjan- residence- MP- Pratap Simha- office-search