Sunday, September 20, 2026

BDA Apartments

ಕಾಲ್ತುಳಿತ ಕೇಸ್: ವಾಸ್ತವ ಏನಿದೆ ಅಂತಾ ಇಂದು ಕೋರ್ಟ್ ಗೆ ವರದಿ ಕೊಡ್ತೇವೆ-ಗೃಹ ...
Home Front Page ಕಾಲ್ತುಳಿತ ಕೇಸ್: ವಾಸ್ತವ ಏನಿದೆ ಅಂತಾ ಇಂದು ಕೋರ್ಟ್ ಗೆ ವರದಿ ಕೊಡ್ತೇವೆ-ಗೃಹ ಸಚಿವ ಪರಮೇಶ್ವರ್

ಕಾಲ್ತುಳಿತ ಕೇಸ್: ವಾಸ್ತವ ಏನಿದೆ ಅಂತಾ ಇಂದು ಕೋರ್ಟ್ ಗೆ ವರದಿ ಕೊಡ್ತೇವೆ-ಗೃಹ ಸಚಿವ ಪರಮೇಶ್ವರ್

ಬೆಂಗಳೂರು,ಜೂನ್,10,2025 (www.justkannada.in):  ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಸ್ತವ ಏನಿದೆ ಅಂತಾ ಇಂದು ಕೋರ್ಟ್ ಗೆ ವರದಿ ಕೊಡುತ್ತೇವೆ ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಗೃಹ ಸಚಿವ ಡಾ.ಜಿ. ಪರಮೇಶ್ವರ್,  ಇಂದು ಕೋರ್ಟ್ ಗೆ ವರದಿ ಸಲ್ಲಿಸಬಬೇಕು.  ಅಡ್ವೊಕೇಟ್ ಜನರಲ್ ಜೊತೆ ಎಲ್ಲವನ್ನೂ ಚರ್ಚಿಸಿದ್ಧೇವೆ. ಸರ್ಕಾರದ ಪರ ಏನು ಹೇಳಬೇಕೆಂದು ಚರ್ಚೆ ಮಾಡಿದ್ದೇವೆ. ವಾಸ್ತವದ ಬಗ್ಗೆ ವರದಿ ನೀಡುತ್ತೇವೆ  ಎಂದರು

ಸಿಎಂ, ಡಿಸಿಎಂ ದೆಹಲಿಗೆ ಹೋಗಿದ್ದಾರೆ. ಏಕೆ ಹೋಗಿದ್ದಾರೆ ಗೊತ್ತಿಲ್ಲ ಪ್ರಕರಣ ಮಾಹಿತಿ ಕೊಡಬಹುದು. ಸಭೆಯ ಅಜೆಂಡಾ ಏನು ಅಂತಾ ಗೊತ್ತಿಲ್ಲ ಕರೆದರೆ ನಾವೂ ಹೋಗುತ್ತೇವೆ. ನಮ್ಮನ್ನ ಕರೆದಿಲ್ಲ ಎಂದು ಪರಮೇಶ್ವರ್ ತಿಳಿಸಿದರು.

ಸುಹಾಸ್ ಶೆಟ್ಟಿ ಹತ್ಯೆ ಕೇಸ್  ತನಿಖೆ ಎನ್ ಐಎಗೆ ನೀಡುತ್ತೇವೆ . ನಮ್ಮ ಮುಂದೆ ಆಯ್ಕೆ ಕಡಿಮೆ. ಹೀಗಾಗಿ  ಪ್ರಕರಣದ ತನಿಖೆ ಎನ್ ಐಎಗೆ ನೀಡಬೇಕು ಎಂದು ಪರಮೇಶ್ವರ್ ತಿಳಿಸಿದರು.vtu

Key words: Stampede case, submit, report, court, Home Minister, Parameshwar