ಮೈಸೂರಿನಲ್ಲಿ ರೌಡಿಶೀಟರ್ ಗಳ ಪೆರೇಡ್: ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಖಡಕ್ ವಾರ್ನಿಂಗ್.

ಮೈಸೂರು,ಫೆಬ್ರವರಿ,14,203(www.justkannada.in):  ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ. ಮೈಸೂರಿನಲ್ಲಿ  ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಸಮ್ಮುಖದಲ್ಲಿ ರೌಡಿಶೀಟರ್ ಗಳ ಪೆರೇಡ್ ನಡೆಸಿ ಎಚ್ಚರಿಕೆ ನೀಡಲಾಯಿತು.

ಹೆಬ್ಬಾಳು ಪೊಲೀಸ್ ಠಾಣೆ ಆವರಣದಲ್ಲಿ ರೌಡಿ ಶೀಟರ್ ಗಳ ಪೆರೇಡ್ ನಡೆಸಲಾಗಿದ್ದು ಮೈಸೂರಿನ ವಿವಿಧ ಪೊಲೀಸ್ ಠಾಣೆಗಳ 76 ರೌಡಿಶೀಟರ್ ಗಳು ರೌಡಿಗಳ ಪೆರೇಡ್ ನಲ್ಲಿ ಭಾಗಿಯಾಗಿದ್ದರು.

ರೌಡಿ ಶೀಟರ್ ಗಳಿಗೆ ಫುಲ್ ಕ್ಲಾಸ್ ತೆಗೆದುಕೊಂಡ ಮೈಸೂರು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಸಮಾಜ ಘಾತುಕ ಕೃತ್ಯಗಳಲ್ಲಿ ಭಾಗಿಯಾಗದಂತೆ ರೌಡಿ ಶೀಟರ್ ಗಳಿಗೆ ಖಡಕ್ ವಾರ್ನಿಂಗ್ ನೀಡಿದರು. ಸಮಾಜಘಾತುಕ ಕೃತ್ಯಗಳಲ್ಲಿ ಭಾಗಿಯಾದರೆ ಮೈಸೂರಿನಿಂದ ಗಡಿಪಾರು ಮಾಡುವುದಾಗಿ ರೌಡಿಶೀಟರ್ ಗಳಿಗೆ ಎಚ್ಚರಿಕೆ‌ ನೀಡಿದರು.

ಡಿಸಿಪಿಗಳಾದ ಮುತ್ತುರಾಜ್, ಜಾನವಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ರೌಡಿಗಳ ಪೆರೇಡ್ ನಡೆಸಿದ ವೇಳೆ ಉಪಸ್ಥಿತರಿದ್ದರು.

Key words: Parade -rowdysheeters – Mysore- Police Commissioner –Ramesh