ಭೂ ಸ್ವಾಧೀನಪಡಿಸಿಕೊಂಡ  ಸ್ಥಳಕ್ಕೆ ಮುಡಾದಿಂದ ಫಲಕ ಅಳವಡಿಕೆ: ಒತ್ತುವರಿ ಮಾಡಿಕೊಂಡಿದ್ದ  ನಿವೇಶನ ತೆರವು…

ಮೈಸೂರು,ಸೆಪ್ಟಂಬರ್,10,2020(www.justkannada.in): ಪರಸ್ಪರ ಒಪ್ಪಂದದ ಮೂಲಕ ಮೈಸೂರಿನ ಸಾತಗಳ್ಳಿ ಬಳಿ ಭೂಮಿಯನ್ನ ಸ್ವಾಧೀನಪಡಿಸಿಕೊಳ್ಳಲಾದ  ಭೂಪ್ರದೇಶದ ಜಾಗಕ್ಕೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ನಾಮಫಲಕ ಅಳವಡಿಸಲಾಯಿತು. panel-muda-land-acquired-clearing-mysore

ಸಾತಗಳ್ಳಿಯ ಸ.ನಂ-68/1,2,3 ಜಮೀನನ್ನು ಮುಡಾ ಪರಸ್ಪರ ಒಪ್ಪಂದದ ಮೂಲಕ ಭೂ ಸ್ವಾಧೀನಪಡಿಸಿಕೊಂಡು ಸಂಬಂಧ ಪಟ್ಟ ಮಾಲೀಕರಿಗೆ ಪರಿಹಾರ ಪಾವತಿಸಿದೆ. ಈ ಜಾಗ ಸುಮಾರು 3 ಎಕರೆ27 ಗುಂಟೆ ಇದ್ದು ಈ ಭೂ ಪ್ರದೇಶವನ್ನು ಭಾಗಶಃ  ಸಾತಗಳ್ಳಿ ಬಡಾವಣೆ ನಿರ್ಮಾಣಕ್ಕೆ ಉಪಯೋಗಿಸಲು ಮುಡಾ ಮುಂದಾಗಿದೆ. ಇನ್ನು ಇಂದು ಈ ಸ್ಥಳಕ್ಕೆ ಮುಡಾ ಆಯುಕ್ತ ಡಿ.ಬಿ ನಟೇಶ್ ಅವರ ನೇತೃತ್ವದಲ್ಲಿ ನಾಮಫಲಕ ಅಳವಡಿಸಲಾಯಿತು. ಈ ವೇಳೆ ಅಭಿಯಂತರಾದ ಶಂಕರ್ ಸೇರಿ ಹಲವರು ಉಪಸ್ಥಿತರಿದ್ದರು.panel-muda-land-acquired-clearing-mysore

ಹಾಗೆಯೇ ಕುವೆಂಪು ನಗರ ಬಡಾವಣೆ  ಪಡುವಣ ರಸ್ತೆ ಹತ್ತಿರ ಖಾಸಗಿಯವರು ಒತ್ತುವರಿ ಮಾಡಿಕೊಂಡಿದ್ದ ಮೂರು ನಿವೇಶನಗಳನ್ನು ಮುಡಾ ವತಿಯಿಂದ ತೆರುವು ಮಾಡಲಾಯಿತು. ಸುಮಾರು 1 ಕೋಟಿ ಬೆಲೆ ಬಾಳುವ ಮುಡಾಗೆ ಸೇರಿದ್ದ ಈ ಮೂರು ನಿವೇಶನಗಳನ್ನು ತೆರವು ಮಾಡಲಾಯಿತು. ಈ ವೇಳೇ ವಲಯ ಅಧಿಕಾರಿ ನಾಗೇಶ್, ನಟೇಶ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

Key words: panel – Muda – land –acquired-Clearing -mysore