ಜನರ ಸಮಸ್ಯೆ ಆಲಿಸಲು ಪಂಚರತ್ನ ಕಾರ್ಯಕ್ರಮ: ಮತ ಪಡೆಯಲು ಮಾಡಿಲ್ಲ-ಬಿಜೆಪಿ ಮತ್ತು ಕಾಂಗ್ರೆಸ್ ವಿರುದ್ದ ಹೆಚ್.ಡಿಕೆ ಗುಡುಗು.

ಕೋಲಾರ,ನವೆಂಬರ್,18,2022(www.justkannada.in):  ಪಂಚರತ್ನ ಕಾರ್ಯಕ್ರಮವನ್ನು ಮತ ಪಡೆಯಲು ಮಾಡಿಲ್ಲ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಜನರ ಕಷ್ಟ ಆಲಿಸುವೆ. ಈ ಸಮಸ್ಯೆಗಳನ್ನ ಪರಿಹರಿಸಲು ಈ ಕಾರ್ಯಕ್ರಮ ಮಾಡಲಾಗುತ್ತಿದೆ.  ಸಿದ್ದರಾಮಯ್ಯ ಹೇಳಿದ ಹುಡುಗಾಟಿಕೆ ಕಾರ್ಯಕ್ರಮ ಅಲ್ಲ ಇದು ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಗುಡುಗಿದರು.

ಕೋಲಾರದಲ್ಲಿ ಇಂದು ಪಂಚರತ್ನ ಯಾತ್ರೆಗೆ ಚಾಲನೆ, ಸಮಾವೇಶದಲ್ಲಿ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಜೆಡಿಎಸ್ ಪಕ್ಷವನ್ನ ಬಿಜೆಪಿಯ ಬಿ ಟೀಮ್  ಎಂದು ಟೀಕಿಸಿದರು. ರಾಹುಲ್ ಗಾಂಧಿ ಕರೆಸಿ ಟೀಕಿಸಿದ್ರು.   ಕಾಂಗ್ರೆಸ್ ನ ಇದೇ ಟೀಕೆಯಿಂದ ನಾವು ಸೋತಿದ್ದು.  ಕರ್ನಾಟಕದ ರಾಜ್ಯದ ಸರ್ಕಾರ ಯಾವುದು ಗೊತ್ತಾ. ಸಿದ್ದರಾಮಯ್ಯನವರ ಬಿಜೆಪಿ ಸರ್ಕಾರ ಇದು ಎಂದು ಕಿಡಿಕಾರಿದರು.

ಸಿದ್ದರಾಮಯ್ಯ ಭಗೀರೈ ಎಂದು ಕರೆಸಿಕೊಂಡರು ಸಿದ್ದರಾಮಯ್ಯನವರೇ ಯಾವ ಭಗೀರಥರೀ..? ಕೋಲಾರ, ಚಿಕ್ಬಳ್ಳಾಪುರಕ್ಕೆ ನೀರು ಕೊಟ್ಟರಾ..?  ಕೋಲಾರಕ್ಕೆ ಬಂದು ಉದ್ಧಾರ ಮಾಡುತ್ತೀರಾ ನೀವು ..? ಉತ್ತಮ ಮಳೆಯಾಗಿದ್ದರಿಂದ ಜನ ಬದುಕಿದ್ದಾರೆ. ಇಲ್ಲದಿದ್ದರೇ ಜನ ಸಂಕಷ್ಟಕ್ಕೆ ಸಿಲುಕುತ್ತಿದ್ದರು ಎಂದು ಹೆಚ್.ಡಿಕೆ ವಾಗ್ದಾಳಿ ನಡೆಸಿದರು.

Key words: Pancharatna-program – listen – people- problems-HD Kumaraswamy