ಮಂಡ್ಯ,ಜನವರಿ,31,2026 (www.justkannada.in): ಪುಸ್ತಕ ಪರಿಚಾರಕ ಹಾಗೂ ಲಿಮ್ಕಾ ದಾಖಲೆಯ ಗ್ರಂಥಾಲಯ ಹೊಂದಿರುವ 2026ನೇ ಸಾಲಿನ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಪುರಸ್ಕಾರಕ್ಕೆ ಭಾಜನರಾದ ಎಂ.ಅಂಕೇಗೌಡ ಅವರಿಗೆ ಜನವರಿ 2 ರಂದು ಕನ್ನಡ ಪುಸ್ತಕ ಪ್ರಾಧಿಕಾರವು ಗೌರವ ಸಮರ್ಪಣೆ ಸಮಾರಂಭವನ್ನು ಏರ್ಪಡಿಸಿದೆ.
ಕನ್ನಡ ಪುಸ್ತಕ ಪ್ರಾಧಿಕಾರದಿಂದ ಅಂದು ಮಧ್ಯಾಹ್ನ 12.00ಗಂಟೆಗೆ ಅಂಕೇಗೌಡ ಜ್ಞಾನ ಪ್ರತಿಷ್ಠಾನ, ಪುಸ್ತಕ ಮನೆ, ಹರಳಹಳ್ಳಿ ಗ್ರಾಮ, ಚಿನಕುರಳಿ ಅಂಚೆ, ಪಾಂಡವಪುರ ತಾ, ಮಂಡ್ಯ ಜಿಲ್ಲೆ ಪುಸ್ತಕ ಪರಿಚಾರಕ ಹಾಗೂ ಲಿಮ್ಕಾ ದಾಖಲೆಯ ಗ್ರಂಥಾಲಯ ಹೊಂದಿರುವ 2026ನೇ ಸಾಲಿನ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಪುರಸ್ಕಾರಕ್ಕೆ ಭಾಜನರಾದ ಎಂ. ಅಂಕೇಗೌಡ ಅವರಿಗೆ ಗೌರವ ಸಮರ್ಪಣೆ ಸಮಾರಂಭ ನಡೆಯಲಿದೆ.
ಈ ಸಂದರ್ಭದಲ್ಲಿ ಎಂ.ಅಂಕೇಗೌಡರಿಗೆ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಮಾನಸ ಅವರು ಗೌರವ ಸಮರ್ಪಣೆ ಮಾಡಲಿದ್ದಾರೆ. ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿ ಕೆ ಬಿ ಕಿರಣ್ ಸಿಂಗ್ ಉಪಸ್ಥಿತರಿರಲಿದ್ದಾರೆ.
Key words: Padma Shri awardee, M. Anke Gowda, felicitated







