ಪಾದರಾಯನಪುರ ದಾಂಧಲೆ: ಪ್ರಕರಣದ ಹಿಂದಿನ ‘ಲೇಡಿ ಡಾನ್’ ಯಾರು ಗೊತ್ತಾ !?

ಬೆಂಗಳೂರು, ಏಪ್ರಿಲ್ 20, 2020 (www.justkannada.in): ಪಾದರಾಯನಪುರ ಗಲಾಟೆಗೆ ಹಿಂದೆ ಲೇಡಿ ಡಾನ್ ಇರುವ ಮಾಹಿತಿ ಸಿಕ್ಕಿದೆ.

ಶಂಕಿತ ಕರೊನಾ ಸೋಂಕಿತರನ್ನು ಸ್ಥಳಾಂತರ ಮಾಡುವಾಗ ನಡೆದ ಈ ಗಲಾಟೆ ಪ್ರೀ ಪ್ಲಾನ್ ಆಗಿತ್ತಾ ಅಥವಾ ಆ ಕ್ಷಣಕ್ಕೆ ಏನಾಯಿತು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಸದ್ಯ ವಶಕ್ಕೆ ಪಡೆದ ಹಲವರು ಕ್ರಿಮಿನಲ್ ಹಿನ್ನೆಲೆ ಹೊಂದಿದವರು ಎಂದು ಪೊಲೀಸರು ಹೇಳಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಯುವತಿಯನ್ನೂ ವಶಕ್ಕೆ ಪಡೆದಿದ್ದೇವೆ. ಆಕೆ ವಿರುದ್ಧ ಗಾಂಜಾ ಮಾರಾಟ ಆರೋಪವಿದೆ. ಈಕೆಯೇ ಗಲಾಟೆ ಮಾಡಲು ಹುಡುಗರನ್ನು ಕರೆಸಿದಳು. ಸಾಕಷ್ಟು ಜನರನ್ನು ಎತ್ತಿಕಟ್ಟಿದ್ದಾಳೆ ಎಂಬ ಆರೋಪ ಕೇಳಿಬರುತ್ತಿದೆ.