Sunday, August 2, 2026

BDA Apartments

Home Front Page ಕಾರ್ಪೋರೇಟರ್ ಇಮ್ರಾನ್ ಪಾಷಾರಿಗೆ ಕೊರೋನಾ ಸೋಂಕು ದೃಢ ಹಿನ್ನೆಲೆ: ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್…

ಕಾರ್ಪೋರೇಟರ್ ಇಮ್ರಾನ್ ಪಾಷಾರಿಗೆ ಕೊರೋನಾ ಸೋಂಕು ದೃಢ ಹಿನ್ನೆಲೆ: ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್…

ಬೆಂಗಳೂರು,ಮೇ,30,2020(www.justkannada.in):  ಪಾದರಾಯನಪುರ ಕಾರ್ಪೋರೇಟರ್ ಇಮ್ರಾನ್ ಪಾಷಾಗೆ ಕೊರೋನಾ  ಸೋಂಕು ದೃಢವಾದ ಹಿನ್ನೆಲೆ, ಅವರನ್ನ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.

ಕಾರ್ಪೋರೇಟರ್ ಇಮ್ರಾನ್ ಪಾಷಾರಿಗೆ ಕೊರೋನಾ ಸೋಂಕು ದೃಢವಾಗುತ್ತಿದ್ದಂತೆ ಅವರನ್ನ ಆಸ್ಪತ್ರೆಗೆ ಕರೆದೊಯ್ಯಲು ಆರೋಗ್ಯಾಧಿಕಾರಿಗಳು ಮತ್ತು ಪೊಲೀಸರು ಪಾದರಾಯನಪುರದ ಇಮ್ರಾನ್ ಪಾಷಾರ ಮನೆ ಮುಂದೆ ಆಗಮಿಸಿದ್ದರು. ಆದರೆ ಇಮ್ರಾನ್ ಪಾಷಾ ತನ್ನ ತಾಯಿ ಬರುವವರೆಗೂ ನಾನು ಆಸ್ಪತ್ರೆಗೆ ಬರಲ್ಲ ಎಂದು ಪಟ್ಟು ಹಿಡಿದು ಮನೆಯೊಳಗೆ ಕುಳಿತಿದ್ದರು.

ಬಳಿಕ ಇಮ್ರಾನ್  ಪಾಷಾ ಪಿಪಿಇ ಕಿಟ್ ಧರಿಸಿ ಆಗಮಿಸಿದ್ದು ಅವರನ್ನ ಆರೋಗ್ಯಾಧಿಕಾರಿಗಳು ಆ್ಯಂಬುಲೆನ್ಸ್ ಮೂಲಕ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನು ಇಮ್ರಾನ್ ಪಾಷಾರ ಮನೆಗೆ ರಾಸಾಯನಿಕ ಸಿಂಪಡಿಸಲಾಗಿದೆ.

Key words: padarayanapura- Corporator- Imran Pasha-corona-Shift -Victoria Hospital.