Sunday, August 2, 2026

BDA Apartments

Home Front Page ಆಪ್ತ ಸಹಾಯಕ ರಮೇಶ್ ಆತ್ಮಹತ್ಯೆ ವಿಚಾರ: ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದ್ದು ಹೀಗೆ…

ಆಪ್ತ ಸಹಾಯಕ ರಮೇಶ್ ಆತ್ಮಹತ್ಯೆ ವಿಚಾರ: ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದ್ದು ಹೀಗೆ…

ಬೆಂಗಳೂರು,ಅ,12,2019(www.justkannada.in): ರಮೇಶ್ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ತಿಳಿದು ನನಗೆ ಅಘಾತವಾಗಿದೆ. ಆತ ಒಳ್ಳೆಯ ಹುಡುಗ. ಎಂತಹ ಸಂದರ್ಭದಲ್ಲೂ ಅಚ್ಚುಕಟ್ಟಾಗಿ ಕೆಲಸ ಮಾಡುತ್ತಿದ್ದ ಎಂದು ಮಾಜಿ ಡಿಸಿಎಂ ಡಾ.ಜಿ. ಪರಮೇಶ್ವರ್ ತಿಳಿಸಿದ್ದಾರೆ.

ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ್ ನಿವಾಸ, ಶಿಕ್ಷಣ ಸಂಸ್ಥೆಗಳ  ಮೇಲೆ ದಾಳಿ ನಡೆಸಿದ್ದ ಐಟಿ ಅಧಿಕಾರಿಗಳು ಪರಂ ಆಪ್ತ ಸಹಾಯಕ ರಮೇಶ್ ಅವರನ್ನ ವಿಚಾರಣೆಗೊಳಪಡಿಸಿದ್ದರು. ಹೀಗಾಗಿ ಐಟಿ ದಾಳಿಯಿಂದ ಬೇಸತ್ತು ರಮೇಶ್ ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಡಿಸಿಎಂ ಪರಮೇಶ್ವರ್, 15 ವರ್ಷಗಳಿಂದ ಕೆಪಿಸಿಸಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ. ರಮೇಶ್ ಅತ್ಯಂತ ಒಳ್ಳೆಯ ಹುಡುಗ , ಎಂಥ ಸಂದರ್ಭದಲ್ಲೂ  ಕೆಲಸವನ್ನ ಅಚ್ಚುಕಟ್ಟಾಗಿ ಮಾಡುತ್ತಿದ್ದ. ಇಂದು ಬೆಳಿಗ್ಗೆ ಮನೆಗೆ ಹೋಗುವಾಗ  ಇದಕ್ಕೆಲ್ಲಾ ಹೆದರಬೇಡ ಏನು ಆಗಲ್ಲ. ಇವೆಲ್ಲಾ ಸಾಮಾನ್ಯ ಎಂದು ಧೈರ್ಯ ಹೇಳಿದ್ದೆ. ಆದರೇ ಏಕೆ ಹೀಗೆ ಮಾಡಿಕೊಂಡನು ಗೊತ್ತಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಮನೆಗೆ ಹೋಗಿ ಸಾಂತ್ವಾನ ಹೇಳಲು ಹೋಗುತ್ತಿರುವುದಾಗಿ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

Key words: PA- Ramesh –suicide-Former DCM -Dr G Parameshwar -Reaction