ನಮ್ಮ ಕಾರ್ಯಕರ್ತರು ದೇಶದ ಸಂಕಲ್ಪ ಸಿದ್ಧಿಗೆ ಹಗಲಿರುಳು ಶ್ರಮಿಸುವ ಸಿಪಾಯಿಗಳು- ಪ್ರಧಾನಿ ಮೋದಿ ಬಣ್ಣನೆ.

ಮಧ್ಯಪ್ರದೇಶ,ಜೂನ್,27,2023(www.justkannada.in): ನಮ್ಮ ಬಿಜೆಪಿ ಕಾರ್ಯಕರ್ತರು ಎಸಿ ರೂಮ್ ನಲ್ಲಿ ಕುಳಿತು ರಾಜನೀತಿ ನಡೆಸುವವರಲ್ಲ. ದೇಶದ ಸಂಕಲ್ಪ ಸಿದ್ಧಿಗೆ ಹಗಲಿರುಳು ಶ್ರಮಿಸುವ ಸಿಪಾಯಿಗಳು ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದರು.

ಇಂದು ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ಚಾಲನೆ ನೀಡಿದ ಬಳಿಕ ವರ್ಚೂವಲ್ ಮೂಲಕ ದೇಶದ ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ನೀವು ನಿಮ್ಮ ಬೂತ್​ನಲ್ಲಿ ವರ್ಷಪೂರ್ತಿ ಕೆಲಸ ಮಾಡುತ್ತಿರುತ್ತೀರಿ, ಪ್ರತಿ ಬಾರಿಯೂ ಮುಖ್ಯಮಂತ್ರಿಗಳು, ಸಚಿವರು, ಪಕ್ಷದ ಅಧ್ಯಕ್ಷರು, ಪ್ರದೇಶ ಕಾರ್ಯಸಮಿತಿ, ಜಿಲ್ಲಾ ಸಮಿತಿ, ಮಂಡಲ ಕಾರ್ಯಸಮಿತಿ ಸದಸ್ಯರೊಂದಿಗೆ ಸಭೆಗಳು ನಡೆಯುವುದು ಸಾಮಾನ್ಯ.  ಆದರೆ ಈ ಬಾರಿ ಬೇರು ಅಂದರೆ ಬೂತ್ ಮಟ್ಟದಿಂದಲೇ ಸಭೆಯನ್ನು ಆಯೋಜಿಸಲಾಗಿದೆ ಎಂದರು.

ಕೇಂದ್ರ ಸರ್ಕಾರ 9 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ದೇಶಾದ್ಯಂತ ಕಾರ್ಯಕ್ರಮ ಮಾಡುತ್ತಿದ್ದೇವೆ, ಅದರಲ್ಲಿ ನಿಮ್ಮನ್ನು ಸೇರಿಸಿಕೊಳ್ಳಬೇಕೆಂಬುದು ಎಲ್ಲರ ಆಶಯವಾಗಿತ್ತು. ಬಿಜೆಪಿ ಕಾರ್ಯಕರ್ತರು ಎಸಿ ಕೊಠಡಿಯಲ್ಲಿ ಕುಳಿತು ರಾಜನೀತಿ ನಡೆಸುವವರಲ್ಲ. ದೇಶದ ಹಳ್ಳಿ, ಗುಡ್ಡ ಗಾಡುಗಳಲ್ಲಿ ಯಾವುದೇ ಪ್ರತಿಕೂಲ ಪರಿಸ್ಥಿತಿಯಲ್ಲೂ ಪ್ರವಾಸ ಮಾಡಿ ಪಕ್ಷವನ್ನು ಕಟ್ಟುವ ಕೆಲಸ ಮಾಡುವವರು ಬಿಜೆಪಿಯವರು.ಹೀಗಾದರೇ  ಮಾತ್ರ ಪಕ್ಷವನ್ನು ಬಲಿಷ್ಠವಾಗಿ ಕಟ್ಟಲು ಸಾಧ್ಯ’ ಎಂದು ತಿಳಿಸಿದರು.

Key words: Our workers –sipayi- country- Prime Minister -Modi