Friday, August 14, 2026

BDA Apartments

Home Front Page ಎನ್ ಐಎ ತನಿಖೆಗಿಂತ ನಮ್ಮ ಪೊಲೀಸರೇ ಸಮರ್ಥರಿದ್ದಾರೆ- ಸಚಿವ ಭೈರತಿ ಸುರೇಶ್

ಎನ್ ಐಎ ತನಿಖೆಗಿಂತ ನಮ್ಮ ಪೊಲೀಸರೇ ಸಮರ್ಥರಿದ್ದಾರೆ- ಸಚಿವ ಭೈರತಿ ಸುರೇಶ್

ಕೋಲಾರ, ಸೆಪ್ಟಂಬರ್,19,2024 (www.justkannada.in):  ನಾಗಮಂಗಲ ಕೋಮು ಗಲಭೆ ಪ್ರಕರಣವನ್ನ ಎನ್ ಐಎ ತನಿಖೆಗೆ ವಹಿಸಿ ಎಂಬ ಬಿಜೆಪಿ ಆಗ್ರಹಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್, ಎನ್ ಐಎ ತನಿಖೆಗಿಂತ ನಮ್ಮ ಪೊಲೀಸರೇ ಸಮರ್ಥರಿದ್ದಾರೆ ಎಂದಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಭೈರತಿ ಸುರೇಶ್, ಕೋಮು ಗಲಭೆ ಸೃಷ್ಠಿಸಿದವರನ್ನ ನೇಣಿಗೆ ಹಾಕಬೇಕು ಎನ್ ಐಎ ತನಿಖೆಗಿಂತ ನಮ್ಮ ಪೊಲೀಸರೇ ಸಮರ್ಥರಿದ್ದಾರೆ. ಎನ್ ಐಎ ತಂಡದಲ್ಲಿ ಇರುವವರೂ ಕೂಡ ನಮ್ಮ ಪೊಲೀಸರೇ . ಯಾರೇ ತಪ್ಪು ಮಾಡಿದ್ರೂ ಬಿಡುವ ಪ್ರಶ್ನೆಯೇ ಇಲ್ಲ ಎಂದರು.

ಮುನಿರತ್ನ ವಿರುದ್ದ ನಾವು ದ್ವೇಷದ ರಾಜಕಾರಣ ಮಾಡುತ್ತಿಲ್ಲ.  ದಲಿತ,  ಒಕ್ಕಲಿಗ ಸಮುದಾಯಕ್ಕೆ ಜಾತಿ ನಿಂದನೆ ಮಾಡಿದ್ದಾರೆ. ಮುನಿರತ್ನ ವಿರುದ್ದ ಅತ್ಯಾಚಾರ ಆರೋಪ ಕೇಳಿ ಬಂದಿದ್ದಕ್ಕೆ ಪೊಲೀಸರಿಂದ ಕ್ರಮ ಕೈಗೊಳ್ಳಲಾಗಿದೆ ನಾವು ದ್ವೇಷದ ರಾಜಕಾರಣ ಮಾಡುತ್ತಿಲ್ಲಎಂದು ತಿಳಿಸಿದರು.

Key words: Our police, capable, NIA ,investigation, Minister, Bhairati Suresh