ಈ ಹಿಂದೆ ಯಾವ ಸರ್ಕಾರ ಕೊಡದಷ್ಟು ಹೆಚ್ಚಿನ ಪರಿಹಾರ ನಮ್ಮ ಸರ್ಕಾರ ಕೊಟ್ಟಿದೆ- ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್…

ಬೆಂಗಳೂರು,ಅ.5,2019(www.justkannada.in): ಈ ಹಿಂದೆ ಯಾವ ಸರ್ಕಾರ ಕೊಡದಷ್ಟು ಹೆಚ್ಚಿನ ಪರಿಹಾರ ನಮ್ಮ ಸರ್ಕಾರ ಕೊಟ್ಟಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದರು.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ನೆರೆ ಬಂದಾಗ ಹಿಂದಿನ ಸರ್ಕಾರಗಳು ಹೇಗೆ ಸ್ಪಂದಿಸಿವೆ ಎಂಬುದು ಎಲ್ಲರಿಗೂ ಗೊತ್ತು. 1 ವರ್ಷದ ಬಳಿಕ ಪರಿಹಾರ ನೀಡಿದ್ದನ್ನ ನಾನು ನೋಡಿದ್ದೇನೆ. ಕೇಂದ್ರದಿಂದ ಹೆಚ್ಚಿನ ಅನುದಾನ ಬಂದಿದೆ. ಕೇಂದ್ರದಿಂದ ನೆರೆ ಪರಿಹಾರ ಬಿಡುಗಡೆಯಾಗುವುದು ವಿಳಂಬವಾಗಿಲ್ಲ. ಯಾವುದೇ ರಾಜ್ಯಗಳಿಗೆ ಪರಿಹಾರ ಬಿಡುಗಡೆ ಮಾಡಬೇಕೆಂದರೆ ರೀತಿನೀತಿಗಳು, ನಿಯಮಗಳು, ಕಾನೂನುಗಳು ಇರುತ್ತವೆ. ಎನ್‍ಡಿಆರ್‍ಎಫ್ ಮಾರ್ಗಸೂಚಿ ಪ್ರಕಾರವೇ ಹಣ ಬಿಡುಗಡೆ ಮಾಡಬೇಕೆಂಬ ನಿಯಮವಿದೆ. ಕೇಂದ್ರ ಇದೆಲ್ಲವನ್ನು ಪಾಲಿಸಿದ್ದರಿಂದ ತುಸು ವಿಳಂಬವಾಗಿದೆ ಎಂದರು.

ಹಿಂದಿನ ಸರ್ಕಾರದಿಂದ ಖಜಾನೆ ಲೂಟಿ…

ಹಿಂದಿನ ಸರ್ಕಾರದ ಅವಧಿಯಲ್ಲಿ ರಾಜ್ಯ ಸರ್ಕಾರದ ಖಜಾನೆಯನ್ನು ಲೂಟಿ  ಮಾಡಲಾಗಿದೆ. ರ್ಕಾರದ ಖಜಾನೆಯನ್ನೇ ಲೂಟಿ ಮಾಡಿದ್ದರ ಪರಿಣಾಮ ನೆರೆ ಸಂತ್ರಸ್ತರಿಗೆ ಪರಿಹಾರ ಕಾರ್ಯ ಕೈಗೊಳ್ಳಲು ವಿಳಂಬವಾಯಿತು. ಈಗ ನಮ್ಮ ಸರ್ಕಾರ ಖಾಲಿಯಾಗಿರುವ ಖಜಾನೆಯನ್ನ ಭರ್ತಿ ಮಾಡಲಿದೆ ಎಂದು ಹೇಳಿದರು.

ಹೀಗಾಗಿ ಪರಿಹಾರ ಕಾರ್ಯಗಳು ಸುಸೂತ್ರವಾಗಿ ನಡೆಯಲಿವೆ ಎಂದರು.

ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಯಾರ ಸರ್ಕಾರದ ಅವಧಿಯಲ್ಲಿ ರಾಜ್ಯದ ಖಜಾನೆ ಲೂಟಿಯಾಗಿತ್ತು ಎಂಬುದನ್ನು ಬಹಿರಂಗಪಡಿಸದೆ, ಹಿಂದಿನ ಸರ್ಕಾರದ ಅವಧಿಯಲ್ಲಿ ಲೂಟಿಯಾಗಿರುವುದು ಜಗಜ್ಜಾಹೀರವಾಗಿದೆ. ಯಾವ ಯಾವ ಮುಖ್ಯಮಂತ್ರಿಗಳು ಏನೇನು ಭ್ರಷ್ಟಾಚಾರ ಮಾಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು. ಇದನ್ನು ನನ್ನ ಬಾಯಿಂದ ಕೇಳಬೇಡಿ ಎಂದು ಮನವಿ ಮಾಡಿದರು.

ಸಿಎಂ ಬಿಎಸ್ ವೈ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದಾರೆ. ಈ ಹಿಂದೆ ಕೊಡಗಿನಲ್ಲಿ ನೆರೆ ಸಂಭವಿಸಿದಾಗ ಮನೆ ಕಳೆದುಕೊಂಡವರಿಗೆ ಪರಿಹಾರ ಹಣ ನೀಡುವುದಾಗಿ ಅಂದು ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದರು. ಆದ್ರೆ ಇನ್ನು ನಿರಾಶ್ರಿತರಿಗೆ ಪರಿಹಾರ ಸಿಕ್ಕಿಲ್ಲ ಎಂದು ಟೀಕಿಸಿದರು.

Key words: Our government – more compensation -BJP President -Nalin Kumar Katil.