ಪೂರ್ಣ ಬಹುಮತದಿಂದ ನಮ್ಮ ಸರ್ಕಾರವೇ ಮತ್ತೆ ಅಧಿಕಾರಕ್ಕೆ- ಜಂಟಿ ಸುದ್ದಿಗೋಷ್ಠಿಯಲ್ಲಿ ವಿಶ್ವಾಸ ವ್ಯಕ್ತಪಡಿಸಿದ ಪ್ರಧಾನಿ ಮೋದಿ ಮತ್ತು ಅಮಿತ್ ಶಾ…

ನವದೆಹಲಿ,ಮೇ,17,2019(www.justkannada.in):  ನಾವು ಜಾರಿಗೆ ತಂದ ಯೋಜನೆಗಳು ದೇಶದ ಕಟ್ಟಕಡೆಯ ವ್ಯಕ್ತಿಗೆ ತಲುಪಿವೆ. ಹೀಗಾಗಿ ಪೂರ್ಣ ಬಹುಮತದಿಂದ ನಮ್ಮ ಸರ್ಕಾರ ಮತ್ತೆ ದೇಶದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದರು.

ನವದೆಹಲಿಯ ಬಿಜೆಪಿ ಕಚೇರಿಯಲ್ಲಿ ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕೆಲವು ವಿಚಾರಗಳನ್ನ ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ  2014ರ  ಚುನಾವಣೆ ವೇಳೆ ಐಪಿಎಲ್ ಪಂದ್ಯಗಳನ್ನ ಬೇರೆಡೆಗೆ ಸ್ಥಳಾಂತರಿಸಲಾಗಿತ್ತು.  ಆದರೆ ಈ ಬಾರಿ ರಂಜಾನ್, ಚುನಾವಣೆ, ಪರೀಕ್ಷೆ ಎಲ್ಲವೂ ಒಟ್ಟಾಗಿ ನಡೆದಿದೆ.   ಈವರೆಗೆ ಚುನಾವಣೆ ಸಕಾರಾತ್ಮಕವಾಗಿ ನಡೆದಿದೆ. ಪೂರ್ಣ ಬಹುಮತದಿಂದ ನಾವು ಮತ್ತೆ ಅಧಿಕಾರಿಕ್ಕೆ ಬರುತ್ತೇವೆ. ಹೆಚ್ಚು ಬಹುಮತದಿಂದ ಹೊಸ ಸರ್ಕಾರ ತನ್ನ  ಹೊಸ ಕೆಲಸಗಳನ್ನ ಪ್ರಾರಂಬಿಸಲಿದೆ ಎಂದು ಹೇಳಿದರು.

ಯಾವ ಸರ್ಕಾರ ಬರುತ್ತೆ ಎಂಬುದು ಜನರು ನಿರ್ಧರಿಸುತ್ತಾರೆ. ದೇಶದ ಕಟ್ಟಕಡೆಯ ವ್ಯಕ್ತಿಗೂ ನಮ್ಮ ಯೋಜನೆ ತಲುಪಿವೆ. ನನ್ನ ಯಾವುದೇ ಕಾರ್ಯಕ್ರಮವೂ ರದ್ಧಾಗಿರಲಿಲ್ಲ . ಚುನಾವಣೆಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

5 ವರ್ಷಗಳಲ್ಲಿ 133 ಯೋಜನೆಗಳು: ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಮತ್ತೆ ಅಧಿಕಾರಕ್ಕೆ- ಅಮಿತ್ ಶಾ…

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ,ಪ್ರಧಾನಿ ಮೋದಿ ಐದು ವರ್ಷಗಳಲ್ಲಿ 133 ಯೋಜನೆಗಳನ್ನ ಜಾರಿಗೆ ತಂದಿದ್ದಾರೆ. ಮತ್ತೆ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದರು.

ಸ್ವಾತಂತ್ರ ಬಳಿಕ ನಡೆದ ಚುನಾವಣೆಗಳಲ್ಲಿ ಈ ಬಾರಿ ಸುದೀರ್ಘ ಚುನಾವಣೆ.  ಈ ಮಹಾ ಚುನಾವಣೆ ಸಂದರ್ಭದಲ್ಲಿ ಜನತೆ ನಮ್ಮ ಜತೆಗಿದ್ದಾರೆ. ಮತ್ತೆ ಮೋದಿ ಸರ್ಕಾರ ರಚನೆಗೆ ಬಿಜೆಪಿ ಕಾರ್ಯಕರ್ತರಿಗಿಂತಲೂ ಜನರಿಗೆ ಹೆಚ್ಚಿನ ಉತ್ಸಹವಿದೆ.  ಸರ್ಕಾರದ ನೀತಿ ಯೋಜನೆಗಳನ್ನ ಜನರಿಗೆ ತಲುಪಿಸಲು ಶ್ರಮ ವಹಿಸಿದ್ದೇವೆ. ಹೆಚ್ಚಿನ ಬಹುಮತದೊಂದಿಗೆ ನಾವು ಮೋದಿ ನೇತೃತ್ವದಲ್ಲಿ ಸರ್ಕಾರ ರಚಿಸುತ್ತೇವೆ.  ಈ ಹಿಂದೆ 6 ರಾಜ್ಯಗಳಲ್ಲಿ ನಮ್ಮ ಪಕ್ಷ ಅಧಿಕಾರದಲ್ಲಿತ್ತು. ಈಗ 16 ರಾಜ್ಯದಲ್ಲಿ ಅಧಿಕಾರದಲ್ಲಿದೆ  ಎಂದರು.

ನರೇಂದ್ರ ಮೋದಿ ಎಲ್ಲಾ ಸುಮುದಾಯಗಳಿಗೆ ತಲುಪುವಂತಹ ಯೋಜನೆಗಳನ್ನ ನೀಡಿದ್ದಾರೆ.  15 ದಿನಕ್ಕೊಮ್ಮೆ ಮೋದಿ ಹೊಸ ಯೋಜನೆ ಘೋಷಿಸಿದ್ದಾರೆ.  ರೈತರು ಮಹಿಳೆಯರು ವಿದ್ಯಾರ್ಥಿಗಳಿಗೆ ಬೇಕಾದ ಯೋಜನೆ ಘೋಷಿಸಿದ್ದಾರೆ.   ರೈತರು ಆದಿವಾಸಿಗಳು ದಲಿತರಿಗೆ ಅಭಿವೃದ್ದಿ  ಕೆಲಸ ಮಾಡಲಾಗಿದೆ. ದೇಶದ 50 ಕೋಟಿ ಬಡಜನತೆಗೆ ಯೋಜನೆಗಳು ತಲುಪಿವೆ. ಪ್ರಧಾನಿ ಮೋದಿ ಅವರ ಯೋಜನೆಗಳು ತಳಮಟ್ಟದವರೆಗೂ ತಲುಪಿವೆ ಒಟ್ಟು 5 ವರ್ಷಗಳಲ್ಲಿ 133 ಯೋಜನೆಗಳನ್ನ ಘೋಷಣೆ ಮಾಡಿದ್ದಾರೆ ಎಂದು ತಿಳಿಸಿದರು.

Key words: Our government is back to power by a full majority-  Prime Minister Modi and Amit Shah confidence

#politicalnews #pmnarendramodi #amithsha #newdehli