140ಕ್ಕೂ ಹೆಚ್ಚು ಸ್ಥಾನ ಗೆಲ್ಲುವುದು ನಮ್ಮ ಗುರಿ: ರಾಜ್ಯದ ಉದ್ದಗಲಕ್ಕೂ ಈಗಾಗಲೇ ಪ್ರವಾಸ ಆರಂಭ- ಮಾಜಿ ಸಿಎಂ ಬಿಎಸ್ ವೈ.

ತುಮಕೂರು,ಜೂನ್,15,2022(www.justkannada.in):  ಮುಂಬರುವ ಚುನಾವಣೆಯಲ್ಲಿ 140ಕ್ಕೂ ಹೆಚ್ಚು ಸ್ಥಾನ ಗೆಲ್ಲುವುದು ನಮ್ಮ ಗುರಿಯಾಗಿದೆ. ಹೀಗಾಗಿ  ರಾಜ್ಯದ ಉದ್ದಗಲಕ್ಕೂ ಈಗಾಗಲೇ ಪ್ರವಾಸ ಆರಂಭ ಮಾಡಿದ್ದೇವೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ನುಡಿದರು.

ತುಮಕೂರಿನಲ್ಲಿ ಇಂದು ಮಾತನಾಡಿದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಮುಂಬರುವ ಚುನಾವಣೆಗೆ ಸಿದ್ದತೆ ಮಾಡಲಾಗ್ತಿದೆ. ನಮ್ಮ ಉದ್ದೇಶ 140 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆದ್ದು ಮತ್ತೊಮ್ಮೆ ಬಿಜೆಪಿಯನ್ನ ಅಧಿಕಾರಕ್ಕೆ ತರಬೇಕು. ಆ ಒಂದು ಹಿನ್ನೆಲೆಯಲ್ಲಿ ರಾಜ್ಯದ ಉದ್ದಗಲಕ್ಕೂ ಈಗಾಗಲೇ ಪ್ರವಾಸ ಆರಂಭ ಮಾಡಿದ್ದೇವೆ. ಜಿಲ್ಲೆಗಳಿಗೆ ಹೋಗಿ ಕಾರ್ಯಕರ್ತರ ಜೊತೆ ಕುಳಿತು ಮಾತನಾಡಿ ಎಲ್ಲಾ ವರ್ಗದ ಜನರನ್ನ ತಮ್ಮ‌ಜೊತೆ ತೆಗೆದುಕೊಂಡು ಹೋಗುವ ಪ್ರಾಮಾಣಿಕ ಪ್ರಯತವನ್ನ ಮಾಡುತ್ತೇವೆ. ಅನೇಕ ಜನ ಬಿಜೆಪಿ ಪಕ್ಷಕ್ಕೆ ಬರೋಕೆ ತುದಿಗಾಲಲ್ಲಿ ನಿಂತಿದ್ದಾರೆ. ಯಾರ್ಯಾರು ಬರೋದ್ರಿಂದ ನಮ್ಮ‌ ಪಕ್ಷಕ್ಕೆ ಲಾಭ ಆಗುತ್ತೆ ಅಂತವರನ್ನ ತಗೊಂಡು ಪಕ್ಷವನ್ನ ಬಲಪಡಿಸುವಂತ ಪ್ರಾಮಾಣಿಕ ಕೆಲಸವನ್ನ ಮಾಡುತ್ತೇವೆ. ಅನೇಕ ಜನ ಬಿಜೆಪಿಗೆ ಬರ್ತಾ ಇದ್ದಾರೆ. ಪಕ್ಷಕ್ಕೆ ಬರೋರನ್ನ ಯಾರು ಬೇಡ ಅಂತ ಹೇಳಲ್ಲ. ಬರೋರಿಗೆ ಯಾರಿಗೆ ಏನ್ ಜವಾಬ್ದಾರಿ ಕೊಡ್ಬೇಕು ಅಂತ ಪಕ್ಷದ ಮುಖಂಡರು ತಿರ್ಮಾನ ಮಾಡ್ತಾರೆ. ಪಕ್ಷಕ್ಕೆ ಬರೋದನ್ನ ಆಲ್ ರೆಡಿ ಶುರುಮಾಡಿದ್ದಾರೆ ಎಂದರು.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಡಿ ವಿಚಾರಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಬಿಎಸ್ ಯಡಿಯೂರಪ್ಪ, ನನಗೂ ಅದಕ್ಕೂ ಸಂಬಂಧ ಇಲ್ಲ. ಇಡಿ ಅವರು ಯಾರ್ ಬಗ್ಗೆ ಏನ್ ಅನುಮಾನ ಇರುತ್ತೆ ಅವರನ್ನ ತನಿಖೆ ಮಾಡ್ತಾರೆ. ಸತ್ಯಾಸತ್ಯತೆ ಹೊರಬರುತ್ತೆ. ನಿರಾಪರಾಧಿಯಾದ್ರೆ ಅವರು ಯಾವುದೇ ಗೊಂದಲ ಇಲ್ಲದೇ ವಾಪಸ್ ಬರ್ತಾರೆ. ಅಪರಾಧಿಗಳಾದ್ರೆ ಸಹಜವಾಗಿ ಯಾರಿಗೆ ಯಾವ ರೀತಿಯಾಗಿ ಶಿಕ್ಷೆ ಆಗ್ಬೇಕು ಆ ರೀತಿಯಾಗಿ ಶಿಕ್ಷೆ ಆಗುತ್ತೆ. ಕಾನೂನಿನಲ್ಲಿ ರಾಹುಲ್ ಗಾಂಧಿ, ಯಡಿಯೂರಪ್ಪ ಬೇರೆ ಮತ್ತೊಬ್ಬರು ಬೇರೆ ಪ್ರಶ್ನೆಯೇ ಇಲ್ಲ. ಇಡಿ ಅವರು ತನಿಖೆ ಮಾಡ್ತಿದ್ದಾರೆ ಕಾದು ನೋಡೋಣ ಎಂದರು.

ಹೊಸ ಲೋಕಾಯುಕ್ತ ಆಯ್ಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಹೊಸ ಲೋಕಾಯುಕ್ತ ಅಧ್ಯಕ್ಷರು ಆಯ್ಕೆ ಆಗಿದ್ದಾರೆ. ಅವರು ಒಳ್ಳೆಯ ಕೆಲಸ ಮಾಡ್ತಿನಿ ಅಂತ ಹೇಳಿದ್ದಾರೆ ಎಂದು ಬಿಎಸ್ ವೈ ತಿಳಿಸಿದರು.

ವಿಜಯೇಂದ್ರ ತುಮಕೂರಿನಲ್ಲಿ ಚುನಾವಣೆಗೆ ಸ್ಫರ್ಧೆ ಬಗ್ಗೆ ಪ್ರತಿಕ್ರಿಯಿಸಿದ ಬಿಎಸ್ ವೈ  ಈ ವಿಚಾರ ಗೊತ್ತಿಲ್ಲ, ಅವರು ಎಲ್ಲಿಂದ ಸ್ಫರ್ಧೆ ಮಾಡ್ತಾರೋ. ಇನ್ನು ತೀರ್ಮಾನ ಆಗಿಲ್ಲ. ಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡ್ತಾರೆ. ಎಲ್ಲಿಂದ ಏನು ಅಂತ ಇನ್ನು ತಿರ್ಮಾನ ಮಾಡಿಲ್ಲ ಎಂದರು.

Key words: Our goal – win-over- 140 seats-Former CM- BSY.