ಕುಶಲಕರ್ಮಿಗಳಿಗೆ ಹೆಚ್ಚು ಅವಕಾಶ ನೀಡುವುದೇ ನಮ್ಮ ಗುರಿ- ದೇವರಾಜ ಅರಸು ನಿಗಮದ ಅಧ್ಯಕ್ಷ ಕೌಟಿಲ್ಯ ರಘು ಹೇಳಿಕೆ…

ಮೈಸೂರು,ನವೆಂಬರ್,28,2020(www.justkannada.in): ಕಾಯಕ‌ ಸಮುದಾಯಗಳು ತಮ್ಮ ವೃತ್ತಿ ಯನ್ನು ಕಳೆದುಕೊಳ್ಳುತ್ತಿದೆ. ಅಂತಹ ಸಮುದಾಯವನ್ನು ಗುರುತಿಸಿ ಆರ್ಥಿಕ ಪುನಶ್ಚೇತನ ನೀಡಬೇಕಿದೆ. ಕುಶಲಕರ್ಮಿಗಳಿಗೆ ಹೆಚ್ಚು ಅವಕಾಶ ನೀಡುವುದೇ ನಮ್ಮ ಗುರಿಯಾಗಿದೆ ಎಂದು ದೇವರಾಜ ಅರಸು ನಿಗಮದ ಅಧ್ಯಕ್ಷ ಕೌಟಿಲ್ಯ ರಘು ತಿಳಿಸಿದರು.I didn't knew CM BSY will think so cheaply - KPCC President D.K. Shivakumar

 ಜಿಲ್ಲಾ ಪತ್ರಕರ್ತರ ಭವನದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ನಿಗಮ ಮಂಡಳಿ ಅಧ್ಯಕ್ಷ ಆರ್.ರಘು, ದೇವರಾಜ ಅರಸು ನಿಗಮದ ಅಡಿಯಲ್ಲಿ 200ಕ್ಕೂ ಹೆಚ್ಚು ಸಮುದಾಯಗಳು ಬರುತ್ತವೆ. ಹಿಂದುಳಿದ ವರ್ಗದ ಸಾಮಾಜಿಕ ಅರ್ಥಿಕ ಸ್ವಾವಲಂಬನೆ ನಿಗಮದ ಹೊಣೆ ಆಗಿದೆ. ಪ್ರಧಾನಿಯವರ ಅತ್ಮನಿರ್ಭರ ಕಲ್ಪನೆಗೆ ಪುಷ್ಠಿ ನೀಡುವ ಕೆಲಸ ಮಾಡುತ್ತೇವೆ ಎಂದರು.

ಬಹುತೇಕ ಕಾಯಕ ಸಮಾಜಗಳು ನಿಗಮದ ಅಡಿಯಲ್ಲಿ ಬರುತ್ತದೆ. ಇವತ್ತಿನ ಸಂದರ್ಭದಲ್ಲಿ ಕಾಯಕ‌ ಸಮುದಾಯಗಳು ತಮ್ಮ ವೃತ್ತಿ ಯನ್ನು ಕಳೆದುಕೊಳ್ಳುತ್ತಿದೆ. ಅಂತಹ ಸಮುದಾಯವನ್ನು ಗುರುತಿಸಿ ಆರ್ಥಿಕ ಪುನಶ್ಚೇತನ ನೀಡಬೇಕಿದೆ. ಕುಶಲಕರ್ಮಿಗಳಿಗೆ ಹೆಚ್ಚು ಅವಕಾಶ ನೀಡುವುದೇ ನಮ್ಮ ಗುರಿಯಾಗಿದೆ ಎಂದು ಕೌಟಿಲ್ಯ ರಘು ತಿಳಿಸಿದರು.

Key words: Our goal -give – more opportunity-mysore-Devaraja Raju Corporation – President -Kautilya Raghu