ಬೊಕ್ಕೆ, ಸಿಹಿ ತಿನಿಸು ಬೇಡ, ಆ ಹಣವನ್ನ ಅನಾಥಾಶ್ರಮಕ್ಕೆ ನೀಡಿ –ಬೆಂಗಳೂರು ಪೊಲೀಸ್ ಆಯುಕ್ತ ಬಿ.ದಯಾನಂದ್ ಸಲಹೆ.

ಬೆಂಗಳೂರು, ಜನವರಿ,1,2023(www.justkannada.in): ಬೊಕ್ಕೆ, ಸಿಹಿತಿನಿಸು ಬೇಡ, ಆ ಹಣವನ್ನ ಅನಾಥಾಶ್ರಮಕ್ಕೆ ನೀಡಿ ಎಂದು  ತಮ್ಮ ಕಿರಿಯ ಅಧಿಕಾರಿಗಳಿಗೆ ಬೆಂಗಳೂರು ಪೊಲೀಸ್ ಕಮಿಷನರ್​ ಬಿ.ದಯಾನಂದ್ ಅವರು ವಿಶೇಷ ಸೂಚನೆ ನೀಡಿ ಮಾದರಿಯಾಗಿದ್ದಾರೆ.

ಹೊಸ ವರ್ಷ ಮತ್ತು ಕೆಲ ವಿಶೇಷ ದಿನಗಳಲ್ಲಿ ಹಿರಿಯ ಅಧಿಕಾರಿಗಳಿಗೆ ಕಿರಿಯ ಅಧಿಕಾರಿಗಳು ಹೂ ಗುಚ್ಚ, ಸಿಹಿ ತಿನಿಸು ನೀಡಿ ಶುಭಾಶಯ ಕೋರೋದು ವಾಡಿಕೆ. ಆದರೆ ಈ ಬಾರಿ ಹೊಸ ವರ್ಷಕ್ಕೆ ಶುಭಾಶಯ ತಿಳಿಸಲು ಬರುವ ಕಿರಿಯ ಅಧಿಕಾರಿಗಳು ಬೊಕ್ಕೆ, ಸಿಹಿ ತಿನಿಸು ತರದೆ ಆ ಹಣವನ್ನ ಅನಾಥಾಶ್ರಮಕ್ಕೆ ನೀಡಿ  ಎಂದು ಬಿ.ದಯಾನಂದ್ ತಿಳಿಸಿದ್ದಾರೆ.

ಹಾಗೆಯೇ ಅನಾಥಾಶ್ರಮಗಳಿಗೆ ಸಹಾಯ ಮಾಡಿದ ಆ ಫೋಟೋವನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಿ. ಫೋಟೋ ಹಂಚಿಕೊಳ್ಳುವುದರಿಂದ ಮತ್ತೊಬ್ಬರಿಗೂ ಮಾದರಿಯಾಗುತ್ತೀರಾ ಎಂದು ಬಿ.ದಯಾನಂದ್ ಸಲಹೆ ನೀಡಿದ್ದಾರೆ.

Key words: orphanage – Bangalore- Police Commissioner -B. Dayanand