300 ಕಿ.ಮೀ ರಾಜಕಾಲುವೆ ಕಾಮಗಾರಿಗೆ ಆದೇಶ- ಸದನದಲ್ಲಿ ಸಿಎಂ ಬೊಮ್ಮಾಯಿ ಮಾಹಿತಿ.

ಬೆಂಗಳೂರು,ಸೆಪ್ಟಂಬರ್,13,2022(www.justkannada.in): 300 ಕಿ.ಮೀ ರಾಜಕಾಲುವೆ ಕಾಮಗಾರಿಗೆ ಆದೇಶ ಮಾಡಲಾಗಿದ್ದು, ರಾಜಕಾಲುವೆ ಕಾಮಗಾರಿಗೆ 1800 ಕೋಟಿ ರೂ. ಅನುದಾನ ನೀಡಲಾಗುತ್ತಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ವಿಧಾನಸಭಾ ಕಲಾಪದಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ರಾಜಕಾಲುವೆ ಕಾಮಗಾರಿ ನಿಲ್ಲದಂತೆ ನೋಡಿಕೊಳ್ಳುತ್ತೇವೆ. ಎಲ್ಲಿ ಅಗತ್ಯವಿದೆಯೋ  ಅಲ್ಲಿ ಶೀಘ ‍್ರಕಾಮಗಾರಿ ಮಾಡುತ್ತೇವೆ.  ರಾಜಕಾಲುವೆ ಕಾಮಗಾರಿ 1800 ಕೋಟೋ ರೂ ನೀಡಲಾಗುತ್ತದೆ ಎಂದರು.

8 ವಲಯದಲ್ಲಿ ಸಮಸ್ಯೆ ಇಲ್ಲ, 2 ವಲಯದಲ್ಲಿ ಸಮಸ್ಯೆ ಇದೆ. ಮಹದೇವಪುರ ವಲಯದಲ್ಲಿ ಮಾತ್ರ ಸಮಸ್ಯೆ ಇದೆ. ವರ್ತೂರು ಹಾಗೂ ಬೆಳ್ಳಂದೂರು ಕೆರೆಗೆ ವ್ಯಾಲಿ ಸೇರುತ್ತೆ. 110 ಹಳ್ಳಿಗಳು ಸೇರಿವೆ, ಅಲ್ಲೂ ಕೂಡ ಕೆರೆಗಳು ಇವೆ. ಸಮರೋಪಾದಿಯಲ್ಲಿ ಸಮಸ್ಯೆಯನ್ನ ಎದುರಿಸೋಣ. ಶಾಸಕರು ತಮ್ಮ ಕ್ಷೇತ್ರದ ಸಮಸ್ಯೆ ಹೇಳಿಕೊಂಡಿದ್ದಾರೆ. ಸ್ಲೂಯಿಸ್ ಗೇಟ್ ಹಾಕಲು ಅನುಮತಿ ನೀಡಿದ್ದೇನೆ. ಎಲ್ಲೂ ಕೆಲಸ ನಿಲ್ಲದಂತೆ ನೋಡಿಕೊಳ್ಳುತ್ತೇವೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

Key words: Order – work – 300 km –Rajkaluve-CM Bommai