ಸರ್ಕಾರದ ಯೋಜನೆ ನಿಲ್ಲಿಸುವ ಧೈರ್ಯ, ಧಮ್ಮು, ತಾಕತ್ತು ವಿರೋಧ ಪಕ್ಷದವರಿಗೆ ಇದೆಯೇ..? ಸಚಿವ ಮಧು ಬಂಗಾರಪ್ಪ.

ಶಿವಮೊಗ್ಗ, ಫೆಬ್ರವರಿ 24,2024(www.justkannada.in): ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿ ಮಾಡಿರುವ ಗ್ಯಾರಂಟಿ ಯೋಜನೆಗಳನ್ನ ಟೀಕಿಸುತ್ತಿರುವ ವಿರೋಧ ಪಕ್ಷದವರಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿರುಗೇಟು ನೀಡಿದ್ದಾರೆ.

ಇಂದು ಶಿವಮೊಗ್ಗದಲ್ಲಿ ಮಾತನಾಡಿದ ಸಚಿವ ಮಧು ಬಂಗಾರಪ್ಪ,  ಗ್ಯಾರಂಟಿ ಯೋಜನೆಗಳಿಗೆ ವ್ಯಾಲಿಡಿಟಿ ಇಲ್ಲ ಎಂದು  ವಿಪಕ್ಷ ಬಿಜೆಪಿ ಟೀಕೆ ಮಾಡಿದ್ದರು. ಈಗ ವಿಪಕ್ಷಗಳಿಗೆ ಸರಕಾರ ಗ್ಯಾರಂಟಿಗಳನ್ನು ಜಾರಿ ಮಾಡುವ  ಮೂಲಕ ಉತ್ತರ ನೀಡಿದೆ. ಸರ್ಕಾರದ ಯೋಜನೆ ನಿಲ್ಲಿಸುವ ಧೈರ್ಯ, ಧಮ್ಮು, ತಾಕತ್ತು ವಿರೋಧ ಪಕ್ಷದವರಿಗೆ ಇದೆಯೇ ಎಂದು ಪ್ರಶ್ನಿಸಿದರು.

ಸಿಎಂ ಸಿದ್ದರಾಮಯ್ಯಗೆ ಸಿದ್ರಾಮುಲ್ಲಾ ಖಾನ್ ಎಂದ ಸಂಸದ ಅನಂತ್ ಕುಮಾರ್ ಹೆಗಡೆ ವಿರುದ್ದ ವಾಗ್ದಾಳಿ ನಡೆಸಿದ ಸಚಿವ ಮಧು ಬಂಗಾರಪ್ಪ, ಸಂಸದ ಅನಂತಕುಮಾರ್ ಹೆಗಡೆ ತಲೆ ಸರಿಯಿಲ್ಲ. ಅನಂತ್ ಕುಮಾರ್ ಹೆಗಡೆ ಹತಾಶನಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ಮಾತನಾಡುತ್ತಿದ್ದಾರೆ. ಆ ವ್ಯಕ್ತಿಯ ಬಗ್ಗೆ ಹೆಚ್ಚು ಮಾತಾಡಿದರೆ ಪ್ರಯೋಜನ ಇಲ್ಲ ಎಂದು  ಕಿಡಿಕಾರಿದರು.

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಮಧು ಬಂಗಾರಪ್ಪ, ಯಾರಿಗೆ ಟಿಕೆಟ್ ಕೊಟ್ಟರೂ ಕೂಡ ಅವರನ್ನು ಗೆಲ್ಲಿಸಿಕೊಂಡು ಬರುತ್ತೇವೆ. ನನ್ನ ಸ್ಪರ್ಧೆ ವಿಚಾರ ಪಕ್ಷದ ತಿರ್ಮಾನಕ್ಕೆ ಬದ್ಧ ಎಂದರು.

Key words:  opposition party – Guarantee scheme-Minister -Madhu Bangarappa.