ಮೇಕೆದಾಟು ಯೋಜನೆ ವಿರೋಧ: ತಮಿಳುನಾಡು ವಿಧಾನಸಭೆಯಲ್ಲಿ ನಿರ್ಣಯ ಮಂಡನೆ.

ಚೆನ್ನೈ,ಮಾರ್ಚ್,21,2022(www.justkannada.in):  ರಾಜ್ಯದ ಮೇಕೆದಾಟು ಯೋಜನೆಗೆ ತಮಿಳುನಾಡು ಸರ್ಕಾರ ಪದೇ ಪದೇ ಅಡ್ಡಗಾಲು ಹಾಕುತ್ತಿದ್ದು ಇದೀಗ ಮತ್ತೆ ತನ್ನ ಖ್ಯಾತೆ ಮುಂದುವರೆಸಿದೆ.

ಹೌದು, ಮೇಕೆದಾಟು ಯೋಜನೆ ವಿರೋಧಿಸಿ ತಮಿಳುನಾಡು ವಿಧಾನಸಭೆಯಲ್ಲಿ ನಿರ್ಣಯ ಮಂಡನೆ ಮಾಡಲಾಗಿದೆ.  ಈ ಕುರಿತು ಮಾತನಾಡಿರುವ ತಮಿಳುನಾಡು ಜಲಸಂಪನ್ಮೂಲ ಸಚಿವ ತುರೈ ಮುರುಗನ್, ಮೇಕೆದಾಟು ಯೋಜನೆ ವಿರುದ್ಧ ನಾವೆಲ್ಲಾ ಒಂದಾಗಿದ್ದೇವೆ. ಮೇಕೆದಾಟು ಯೋಜನೆಗೆ ಕರ್ನಾಟಕ  ಬಜೆಟ್ ನಲ್ಲಿ ಹಣ ಮೀಸಲಿಟ್ಟಿರುವುದು ಕಾನೂನು ಬಾಹಿರ ಎಂದು ಹೇಳಿಕೆ ನೀಡಿದ್ದಾರೆ.

ಸಿಎಂ ಬಸವರಾಜ ಬೊಮ್ಮಾಯಿ ಮೇಕೆದಾಟು ಯೋಜನೆಗೆ ಬಜೆಟ್ ನಲ್ಲಿ 1 ಸಾವಿರ ಕೋಟಿ ರೂ. ಹಣ ಮೀಸಲಿಟ್ಟಿದ್ದಾರೆ. ಈ ಮಧ್ಯೆ ಕಳೆದ ಎರಡು ದಿನಗಳ ಹಿಂದಷ್ಟೇ ಸಿಎಂ ಬಸವರಾಜ ಬೊಮ್ಮಾಯಿ ಸರ್ವಪಕ್ಷಗಳ ಸಭೆ ನಡೆಸಿದ್ದು ಸಭೆಯಲ್ಲಿ ಪ್ರಧಾನಿ ಮೋದಿ ಬಳಿ  ಸರ್ವಪಕ್ಷಗಳ ನಿಯೋಗ ಕರೆದೊಯ್ಯಲು ತೀರ್ಮಾನಿಸಲಾಗಿದೆ.

Key words: Opposition – mekedatu plan-Tamilnadu

ENGLISH SUMMARY…

Mekedatu project opposed: Resolution passed in TN Assembly
Chennai, March 21, 2022 (www.justkannada.in): The Tamil Nadu government, which has been opposing the Mekedatu project by Government of Karnataka has yet again started troubling us.
The Tamil Nadu government today passed a resolution in the legislative assembly against the Mekedatu project. Speaking to the reporters about this, Tamil Nadu Water Resources Minister Turai Murugan informed that all of them are united against this project. He alleged that it is illegal for the Govt. of Karnataka to announce budget allocation for this project.
The Chief Minister of Karnataka, Basavaraj Bommai has announced Rs. 1,000 crores allocation in the budget for Mekedatu project. He has also conducted an all party meeting about this project, just two days ago, where they have decided to take an all party delegation to Prime Minister Modi.
In the meantime Tamil Nadu Government has again started poking its nose in this prject opposing the project and has passed a resolution in the assembly.
Keywords: Tamil Nadu Govt./ Mekedat Project/ opposed/ resolution/ TN assembly