ಸ್ಥಳೀಯ ಬಿಜೆಪಿ ನಾಯಕರಿಂದಲೇ ವಿರೋಧ ಹಿನ್ನೆಲೆ: ತೀರ್ಪು ಏನೇ ಬಂದ್ರೂ ನಮ್ಮ ಕೈ ಬಿಡಬೇಡಿ ಎಂದು ಸಿಎಂಗೆ ಮನವಿ ಮಾಡಿದ ಅನರ್ಹ ಶಾಸಕ…

ಬೆಂಗಳೂರು,ನ,3,2019(www.justkannada.in):  ಡಿಸೆಂಬರ್ 5 ರಂದು ರಾಜ್ಯದ 15 ಕ್ಷೇತ್ರಗಳಿಗೆ ಉಪಚುನಾವಣೆ ಹಿನ್ನೆಲೆ ಅನರ್ಹ ಶಾಸಕರಿಗೆ ಬಿಜೆಪಿ ಟಿಕೆಟ್ ನೀಡಲು ಮುಂದಾಗಿದರೇ ಇತ್ತ ಸ್ಥಳೀಯ ಬಿಜೆಪಿ ಮುಖಂಡರೇ ಬಂಡಾಯದ ಬಾವುಟ ಹಾರಿಸುತ್ತಿದ್ದಾರೆ.

ಈ ನಡುವೆ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಅನರ್ಹ ಶಾಸಕ ಗೋಪಾಲಯ್ಯ ಸ್ಪರ್ಧೆಗೆ ಸ್ಥಳೀಯ ಬಿಜೆಪಿ ಮುಖಂಡರು ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಸುಪ್ರೀಂಕೋರ್ಟ್ ನಲ್ಲಿ ತೀರ್ಪು ಏನೇ ಬಂದರೂ ನಮ್ಮ ಕೈ ಬಿಡಬೇಡಿ ಎಂದು ಅನರ್ಹ ಶಾಸಕ ಗೋಪಾಲಯ್ಯ ಸಿಎಂ ಬಿಎಸ್ ಯಡಿಯೂರಪ್ಪ ಬಳಿ ಮನವಿ ಮಾಡಿದ್ದಾರೆ.

ನನಗೆ ಟಿಕೆಟ್ ನೀಡಿ. ಇಲ್ಲದಿದ್ದರೇ ನಾನು ಹೇಳಿದವರಿಗೆ ಟಿಕೆಟ್ ನೀಡಿ.  ಕ್ಷೇತ್ರದಲ್ಲಿ ಮತದಾರರು ಮತ್ತು ಕಾರ್ಯಕರ್ತರಿಗೆ ನನ್ನ ವಿರುದ್ದ ಬಿಜೆಪಿ ಮುಖಂಡರು  ತಪ್ಪು ಸಂದೇಶ ಕೊಟ್ಟಿದ್ದಾರೆ. ಈ ಬಗ್ಗೆ ಗಮನ ಹರಿಸಿ ಕಂಟ್ರೋಲ್ ಮಾಡಿ ಎಂದು ಗೋಪಾಲಯ್ಯ ಸಿಎಂ ಬಿಎಸ್ ಯಡಿಯೂರಪ್ಪಗೆ ಆಗ್ರಹಿಸಿದ್ದಾರೆ ಎನ್ನಲಾಗಿದೆ.

Key words: Opposition -local -BJP leaders-disqualified MLA – appealed – CM bs yeddyurappa